PHOTOS| ಡೊನಾಲ್ಡ್​​ ಟ್ರಂಪ್​​ ಭಾರತ ಪ್ರವಾಸದ ಮೊದಲ ದಿನದ ವಿಶೇಷ ಕ್ಷಣಗಳ ಫೋಟೋ ಝಲಕ್​ !

Namaste Trump 24
Published on

ಅಹಮದಾಬಾದ್​​: ವಿಶ್ವದ ದೊಡ್ಡಣ್ಣನೆಂದೇ ಖ್ಯಾತಿಯಾಗಿರುವ ಅಮೆರಿಕ ಮತ್ತು ಭಾರತ ನಡುವಿನ ಸಂಬಂಧಕ್ಕೆ ಗುಜರಾತಿನ ಅಹಮದಬಾದ್​ನಲ್ಲಿ ಇಂದು ನಡೆದ "ನಮಸ್ತೆ ಟ್ರಂಪ್" ಕಾರ್ಯಕ್ರಮ ಹೊಸ ಭಾಷ್ಯ ಬರೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾಗಿಯಾಗಿದ್ದರು. ಟ್ರಂಪ್​ ಅವರಿಗೆ ಇದು ಭಾರತದ ಮೊದಲನೇ ಭೇಟಿ ಎಂಬುದು ವಿಶೇಷ. ಹೀಗಾಗಿ ಎಂದೂ ಮರೆಯದ ಸ್ಮರಣೀಯ ಸ್ವಾಗತವನ್ನು ಭಾರತೀಯರ ನೀಡಿದರು. ಅದಕ್ಕೆ ಟ್ರಂಪ್​ ಕೂಡ ಧನ್ಯವಾದ ತಿಳಿಸಿದರು.

ಟ್ರಂಪ್​ ತಾವೊಬ್ಬರೇ ಬರದೇ ತಮ್ಮ ಪತ್ನಿ ಹಾಗೂ ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್​, ಪುತ್ರಿ ಇವಾಂಕ ಟ್ರಂಪ್​ ಹಾಗೂ ಅಳಿಯ ಜರೇದ್​ ಕುಶ್ನರ್​ ಮತ್ತು ಅಮೆರಿಕ ನಿಯೋಗವನ್ನು ತಮ್ಮೊಡನೆ​ ಕರೆತಂದಿದ್ದರು. ಇಂದು ಬೆಳಗ್ಗೆ ಅಹಮದಬಾದ್​ನ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಬೃಹತ್​ ರೋಡ್​ ಶೋ ಮೂಲಕ ಸಬರಮತಿಯ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ, ಗಾಂಧಿ ಜೀವನವನ್ನು ಮೆಲುಕು ಹಾಕಿದರು. ಬಳಿಕ ವಿಶ್ವದ ಬಹುದೊಡ್ಡ ಮೊಟೆರಾ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ "ನಮಸ್ತೆ ಟ್ರಂಪ್​" ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿ ಸೇರಿದಂತೆ ಭಾರತೀಯರನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಸುಮಾರು ಒಂದು ಲಕ್ಷ ಮಂದಿಗೂ ಧನ್ಯವಾದ ತಿಳಿಸಿದರು.

ಬಳಿಕ ಅಹಮದಾಬಾದ್​ನಿಂದ ಉತ್ತರ ಪ್ರದೇಶದ ಆಗ್ರಾಗೆ ತೆರಳಿದ ಟ್ರಂಪ್​ ಕುಟುಂಬ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲಿನ ಸೊಬಗನ್ನು ಕಣ್ತುಂಬಿಕೊಂಡರು. ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಭೇಟಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಂಡರು. ಬಳಿಕ ಅಲ್ಲಿಂದ ಟ್ರಂಪ್​ ಕುಟುಂಬ ದೆಹಲಿಗೆ ಪ್ರಯಾಣ ಬೆಳೆಸಿತು.

ಇಂದು ಭಾರತದಲ್ಲಿ ಇಡೀ ದಿನ ಟ್ರಂಪ್​ ಮಯವಾಗಿತ್ತು. ಟ್ರಂಪ್​ ಹೋದಲೆಲ್ಲಾ ಅದ್ಧೂರಿ ಸ್ವಾಗತವನ್ನು ನೀಡಲಾಯಿತು. ವಿವಿಧ ಕಲಾತಂಡಗಳು, ವಿದ್ಯಾರ್ಥಿಗಳು ಟ್ರಂಪ್​ ಕುಟುಂಬವನ್ನು ಆತ್ಮೀಯವಾಗಿ ಬರಮಾಡಿಕೊಂಡು ಅಷ್ಟೇ ಪ್ರೀತಿಯಿಂದ ಬೀಳ್ಕೊಟ್ಟರು. ಟ್ರಂಪ್​ ಹಾದು ಹೋಗುವ ರಸ್ತೆಯುದ್ದಕ್ಕೂ ಸ್ವಾಗತ ಸಂದೇಶ ಸೇರಿದಂತೆ ಪ್ರಧಾನಿ ಮೋದಿ ಜತೆಗಿನ ಪೋಸ್ಟರ್​ಗಳು ರಾರಾಜಿಸಿದವು. ಒಂದೇ ದಿನದಲ್ಲಿ ಹಲವು ಉತ್ತಮ ಕ್ಷಣಗಳನ್ನು ಟ್ರಂಪ್​ ಅವರಿಗೆ ಭಾರತೀಯರು ಕೊಡುಗೆ ನೀಡಿದರು. ಹೀಗಾಗಿ ಟ್ರಂಪ್​ ಅವರ ಇಡೀ ದಿನದ ಝಲಕ್​ ಅನ್ನು ಈ ಕೆಳಕಂಡ ಅದ್ಭುತ ಫೋಟೋಗಳ ಮೂಲಕ ಕಣ್ತುಂಬಿಕೊಳ್ಳಬಹುದಾಗಿದೆ.

Namaste Trump 5
Namaste Trump 6
Namaste Trump 7
Namaste Trump 8
Namaste Trump 9
Namaste Trump 10
Namaste Trump 11
Namaste Trump 12
Namaste Trump 13
Namaste Trump 14
Namaste Trump 15
Namaste Trump 16
Namaste Trump 17
Namaste Trump 18
Namaste Trump 19
Namaste Trump 20
Namaste Trump 21
Namaste Trump 22
Namaste Trump 23
Namaste Trump 24
Namaste Trump 25
Namaste Trump 26
Namaste Trump 27
Namaste Trump 28
Namaste Trump 29
Namaste Trump 30

ಅಹಮದಾಬಾದ್​​: ವಿಶ್ವದ ದೊಡ್ಡಣ್ಣನೆಂದೇ ಖ್ಯಾತಿಯಾಗಿರುವ ಅಮೆರಿಕ ಮತ್ತು ಭಾರತ ನಡುವಿನ ಸಂಬಂಧಕ್ಕೆ ಗುಜರಾತಿನ ಅಹಮದಬಾದ್​ನಲ್ಲಿ ಇಂದು ನಡೆದ "ನಮಸ್ತೆ ಟ್ರಂಪ್" ಕಾರ್ಯಕ್ರಮ ಹೊಸ ಭಾಷ್ಯ ಬರೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾಗಿಯಾಗಿದ್ದರು. ಟ್ರಂಪ್​ ಅವರಿಗೆ ಇದು ಭಾರತದ ಮೊದಲನೇ ಭೇಟಿ ಎಂಬುದು ವಿಶೇಷ. ಹೀಗಾಗಿ ಎಂದೂ ಮರೆಯದ ಸ್ಮರಣೀಯ ಸ್ವಾಗತವನ್ನು ಭಾರತೀಯರ ನೀಡಿದರು. ಅದಕ್ಕೆ ಟ್ರಂಪ್​ ಕೂಡ ಧನ್ಯವಾದ ತಿಳಿಸಿದರು.

ಟ್ರಂಪ್​ ತಾವೊಬ್ಬರೇ ಬರದೇ ತಮ್ಮ ಪತ್ನಿ ಹಾಗೂ ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್​, ಪುತ್ರಿ ಇವಾಂಕ ಟ್ರಂಪ್​ ಹಾಗೂ ಅಳಿಯ ಜರೇದ್​ ಕುಶ್ನರ್​ ಮತ್ತು ಅಮೆರಿಕ ನಿಯೋಗವನ್ನು ತಮ್ಮೊಡನೆ​ ಕರೆತಂದಿದ್ದರು. ಇಂದು ಬೆಳಗ್ಗೆ ಅಹಮದಬಾದ್​ನ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಬೃಹತ್​ ರೋಡ್​ ಶೋ ಮೂಲಕ ಸಬರಮತಿಯ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ, ಗಾಂಧಿ ಜೀವನವನ್ನು ಮೆಲುಕು ಹಾಕಿದರು. ಬಳಿಕ ವಿಶ್ವದ ಬಹುದೊಡ್ಡ ಮೊಟೆರಾ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ "ನಮಸ್ತೆ ಟ್ರಂಪ್​" ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿ ಸೇರಿದಂತೆ ಭಾರತೀಯರನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಸುಮಾರು ಒಂದು ಲಕ್ಷ ಮಂದಿಗೂ ಧನ್ಯವಾದ ತಿಳಿಸಿದರು.

ಬಳಿಕ ಅಹಮದಾಬಾದ್​ನಿಂದ ಉತ್ತರ ಪ್ರದೇಶದ ಆಗ್ರಾಗೆ ತೆರಳಿದ ಟ್ರಂಪ್​ ಕುಟುಂಬ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲಿನ ಸೊಬಗನ್ನು ಕಣ್ತುಂಬಿಕೊಂಡರು. ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಭೇಟಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಂಡರು. ಬಳಿಕ ಅಲ್ಲಿಂದ ಟ್ರಂಪ್​ ಕುಟುಂಬ ದೆಹಲಿಗೆ ಪ್ರಯಾಣ ಬೆಳೆಸಿತು.

ಇಂದು ಭಾರತದಲ್ಲಿ ಇಡೀ ದಿನ ಟ್ರಂಪ್​ ಮಯವಾಗಿತ್ತು. ಟ್ರಂಪ್​ ಹೋದಲೆಲ್ಲಾ ಅದ್ಧೂರಿ ಸ್ವಾಗತವನ್ನು ನೀಡಲಾಯಿತು. ವಿವಿಧ ಕಲಾತಂಡಗಳು, ವಿದ್ಯಾರ್ಥಿಗಳು ಟ್ರಂಪ್​ ಕುಟುಂಬವನ್ನು ಆತ್ಮೀಯವಾಗಿ ಬರಮಾಡಿಕೊಂಡು ಅಷ್ಟೇ ಪ್ರೀತಿಯಿಂದ ಬೀಳ್ಕೊಟ್ಟರು. ಟ್ರಂಪ್​ ಹಾದು ಹೋಗುವ ರಸ್ತೆಯುದ್ದಕ್ಕೂ ಸ್ವಾಗತ ಸಂದೇಶ ಸೇರಿದಂತೆ ಪ್ರಧಾನಿ ಮೋದಿ ಜತೆಗಿನ ಪೋಸ್ಟರ್​ಗಳು ರಾರಾಜಿಸಿದವು. ಒಂದೇ ದಿನದಲ್ಲಿ ಹಲವು ಉತ್ತಮ ಕ್ಷಣಗಳನ್ನು ಟ್ರಂಪ್​ ಅವರಿಗೆ ಭಾರತೀಯರು ಕೊಡುಗೆ ನೀಡಿದರು. ಹೀಗಾಗಿ ಟ್ರಂಪ್​ ಅವರ ಇಡೀ ದಿನದ ಝಲಕ್​ ಅನ್ನು ಈ ಕೆಳಕಂಡ ಅದ್ಭುತ ಫೋಟೋಗಳ ಮೂಲಕ ಕಣ್ತುಂಬಿಕೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net