

ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಸಂಬಂಧಿತ ಚಟುವಟಿಕೆಗಳು ದೂರವಾಗಿವೆ. ಈ ಸಂದರ್ಭದಲ್ಲಿ ಆ ಭಯ ದೂರ ಮಾಡಲು ‘ನಮಗಾಗಿ ಜೀವ ಕೊಟ್ಟವರು’ ಹೆಸರಲ್ಲೊಂದು ವಿಡಿಯೋ ಸಾಂಗ್ ನಿರ್ಮಿಸಿ, ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಗೊಳಿಸಿದ್ದಾರೆ ಮಹೇಂದ್ರ ಮನೂತ್.
ಇದನ್ನೂ ಓದಿ: ಮೀರಾಗೆ ಕೈಲಾಸಕ್ಕೆ ಹೋಗೋ ಆಸೆಯಂತೆ …
ಕರೊನಾ ವಾರಿಯರ್ಸ್ ಹೆಸರಲ್ಲಿ ಸರ್ಕಾರದ ಜತೆಗೆ ವೈದ್ಯರು, ದಾದಿಯರು, ಪೊಲೀಸರು, ಮಾಧ್ಯಮದವರು, ಸಂಘ ಸಂಸ್ಥೆಗಳ ಜನರು, ಸಾಮಾಜಿಕ ಹೋರಾಟಗಾರರು ಸೇರಿ ಎಲ್ಲಾ ರೀತಿಯ ಜನರು ನಿರಂತರವಾಗಿ ಹೋರಾಡುತ್ತಾ ಬಂದಿದ್ದಾರೆ. ಅವರೆಲ್ಲರ ಶ್ರಮವನ್ನು ಸ್ಮರಿಸುವ ಮತ್ತು ಗೌರವಿಸುವ ರೂಪದಲ್ಲಿ ಈ ಹಾಡು ಮೂಡಿ ಬಂದಿದೆ.
ಇದನ್ನೂ ಓದಿ: ಓಟಿಟಿ ಮಡಿಲಿಗೆ ಧನುಷ್ ‘ಜಗಮೇ ತಂಧೀರಮ್’?
ಐದು ನಿಮಿಷಗಳ ಅವಧಿಯ ಈ ಹಾಡಿನಲ್ಲಿ ಮಹೇಂದ್ರ ಮನೂತ್ ಸೇರಿ ಹಲವರು ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ರೇವಣ್ಣ ನಾಯಕ್ ಗೀತೆ ರಚನೆ ಮಾಡಿದ್ದು, ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಬಿ.ಪಿ. ಹರಿಹರನ್ ನಿರ್ದೇಶಿಸಿರುವ ಈ ಹಾಡಿಗೆ ಜಾನ್ ಛಾಯಾಗ್ರಹಣ ಮಾಡಿದ್ದಾರೆ. ಸಚಿನ್ ಧ್ವನಿ ನೀಡಿದ್ದಾರೆ.