ಡಿಜೆ ಹಳ್ಳಿ ಗಲಭೆ ಹಿಂದಿದೆ ಮಾಜಿ ಸಚಿವರೊಬ್ಬರ ಕೈವಾಡ; ನಳೀನ್​ ಕುಮಾರ್​ ಕಟೀಲ್

DJhalli
DJhalli
Published on

ಹುಬ್ಬಳ್ಳಿ: ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆ ಹಿಂದೆ ರಾಜಕೀಯ ಪಕ್ಷಗಳ ಹುನ್ನಾರವಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರ್ಕಾರ ನಿರ್ಧರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಹೇಳಿದರು.

ಈ ದಾಂಧಲೆ ರಾಜಕೀಯ ಹುನ್ನಾರದಿಂದ ನಡೆದಿದೆ. ಹಿಂಸಾಚಾರದ ಹಿಂದೆ ಮಾಜಿ ಸಚಿವರೊಬ್ಬರ ಕೈವಾಡ, ಎಸ್​ಡಿಪಿಐ, ಕೆಎಫ್​ಡಿ ಸಂಘಟನೆಗಳ ಹುನ್ನಾರ ಅಡಗಿದೆ. ಏಕಾಏಕಿ 3 ಸಾವಿರ ಜನ ಸೇರಿದ್ದು ಹೇಗೆ? ಅಲ್ಲಿ ಪೆಟ್ರೋಲ್, ಕಲ್ಲುಗಳು ಹೇಗೆ ಬಂದವು..? ಪೂರ್ವ ನಿಯೋಜಿತವಾಗಿಯೇ ಗಲಭೆ ಮಾಡಿದ್ದಾರೆ. ಈ ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.
ನಿನ್ನೆ (ಮಂಗಳವಾರ) ರಾತ್ರಿ ಕಾವಲ್​ಭೈರಸಂದ್ರ ವಾರ್ಡ್​ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಶಾಸಕರ ಮನೆ, ಪೊಲೀಸ್​ ಠಾಣೆ, ಅಂಗಡಿಗಳು ಸೇರಿದಂತೆ ಸಿಕ್ಕಸಿಕ್ಕ ವಾಹನಗಳ ಮೇಲೂ ಕಿಡಿಗೇಡಿಗಳ ಗುಂಪು ಮನಸೋ ಇಚ್ಛೆ ದಾಂಧಲೆ ನಡೆಸಿತ್ತು. ವಾಹನಗಳು-ಶಾಸಕರ ಮನೆಗೂ ಬೆಂಕಿ ಇಟ್ಟು ವಿಕೃತಿ ಮೆರೆದರು. ಪೊಲೀಸರು, ಪತ್ರಕರ್ತರ ಮೇಲೂ ಕಲ್ಲುತೂರಾಟ, ಬಾಟಲಿಗಳನ್ನು ಎಸೆದು ಇಡೀ ಏರಿಯಾವನ್ನೇ ಪ್ರಕ್ಷುಬ್ಧ ಸ್ಥಿತಿಗೆ ತಂದೊಡ್ಡಿದ್ದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಅವಹೇಳನ ಮಾಡಬಾರದು. ಅದು ಕಾನೂನು ಬಾಹಿರ. ಅದರ ಹೆಸರಿನಲ್ಲಿ ಗಲಭೆ ಮಾಡೋದು ಹುಚ್ಚು ಧರ್ಮ. ಗಲಭೆಯಲ್ಲಿ ಸರ್ಕಾರಿ ಕಚೇರಿಗಳನ್ನ ದ್ವಂಸ ಮಾಡಿರೋದು ಅಪರಾಧ. ಒಟ್ಟಾರೆ ಈ ದಾಂಧಲೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಗಲಭೆಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನೂ ಬಂಧಿಸಲು ಪೊಲೀಸ್ ಇಲಾಖೆ ಪ್ರಯತ್ನ ಮಾಡುತ್ತಿದೆ. ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ನೋಡಿಕೊಳ್ಳುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net