

ಬೆಂಗಳೂರ: ಡಿಜೆ ಹಳ್ಳಿ ಗಲಭೆ ಪ್ರಕರಣದ ಹಿಂದೆ ರಾಜಕೀಯ ದುರುದ್ದೇಶದ ಹೊಗೆಯಾಡುತ್ತಿದ್ದು, ಪಾಲಿಕೆ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಸಿದ್ರಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಅಖಂಡ ಶ್ರೀನಿವಾಸ್ ಅಳಿಯ ಆರೋಪಿ ನವೀನ್ ಪಾಲಿಕೆ ಚುನಾವಣೆ ತಯಾರಿ ನಡೆಸುತ್ತಿದ್ದರೂ ಎನ್ನಲಾಗಿದೆ. ಕಾವಲುಭೈರಸಂದ್ರ ವಾರ್ಡ್ನಿಂದ ಸ್ಪರ್ಧಿಸಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಹೀಗಾಗಿ ಮತಕ್ಕಾಗಿ ಒಂದು ಕೋಮಿನ ಓಲೈಕೆ ಮಾಡಲು ನವೀನ್ ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ ಮಾಡಿದ್ದಾನೆ ಎನ್ನಲಾಗಿದೆ.
ಇನ್ನೊಂದೆಡೆ ಕಾರ್ಪೋರೇಟರ್ ಸ್ಥಾನಕ್ಕೆ ಸ್ಪರ್ಧಿಸಲು ತಯಾರಿಸಿ ನಡೆಸಿರುವ ಮುಜಾಮುಲಿಮ್ ಪಾಷ ನವೀನ್ನನ್ನು ಸರ್ವನಾಶ ಮಾಡಲು ಗಲಾಟೆಹೆ ಕುಮ್ಮಕ್ಕೂ ನೀಡಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಗಲಭೆ ಸೃಷ್ಟಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈಗಾಗಲೇ ಆರೋಪಿ ನವೀನ್ ಹಾಗೂ ಮುಜಾಮಿಲ್ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ 100ಕ್ಕೂ ಅಧಿಕ ಮಂದಿಯನ್ನು ಗಲಾಟೆಗೆ ಕರೆತಂದಿದ್ದ ಇನ್ನೊಬ್ಬ ಆರೋಪಿ ಅಯಾಜ್ನನ್ನು ಬಂಧಿಸಲಾಗಿದೆ. ಗಲಭೆ ವೇಳೆ 100 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಲಭೆ ನಿಯಂತ್ರಿಸಲು ನಡೆದ ಗೋಲಿಬಾರ್ನಲ್ಲಿ ಇಬ್ಬರು ಮೂವರು ಸಾವಿಗೀಡಾಗಿದ್ದು, 80 ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಸಾಕಷ್ಟು ವಾಹನಗಳು ಜಖಂಗೊಂಡಿದ್ದು, ಗಲಭೆಯಲ್ಲಿ ಬೆಂಕಿಯನ್ನು ಇಡಲಾಗಿದೆ. ಸಾರ್ವಜನಿಕರು ಸಹ ತೊಂದರೆಯನ್ನು ಅನುಭವಿಸಿದ್ದಾರೆ.
ಘಟನೆ ಹಿನ್ನೆಲೆ ಏನು?
ಶಾಸಕ ಅಖಂಡ ಶ್ರೀನಿವಾಸ್ ಅಳಿಯ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಗಲಭೆ ನಡೆದಿದೆ. ಇದೀಗ ಪ್ರಕರಣಕ್ಕೆ ರಾಜಕೀಯ ದುರುದ್ದೇಶ ತಳುಕು ಹಾಕಿಕೊಂಡಿದೆ. (ಏಜೆನ್ಸೀಸ್)