

ನೆಲಮಂಗಲ: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಸಿನಿಮಾದ ಸೆಟ್ ಬೆಂಕಿಗೆ ಆಹುತಿಯಾದ ಬೆನ್ನಲ್ಲೆ ಚಿತ್ರ ತಂಡ ಸಂಚರಿಸುತ್ತಿದ್ದ ಬಸ್ ಅಪಘಾತಕ್ಕೆ ತುತ್ತಾಗಿದೆ.
ನೆಲಮಂಗಲದ ಬಳಿ ಇರುವ ಮೋಹನ್ ಬಿ ಕೆರೆ ಸ್ಟುಡಿಯೋಗೆ ಬೆಂಗಳೂರಿನಿಂದ ಕಲಾವಿದರು ಸಂಚರಿಸುತ್ತಿದ್ದ ಬಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ನಿಂತಿತು.
ಬಸ್ ಅಪ್ಪಳಿಸಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಬಸ್ ಮೇಲೆ ಬಿತ್ತು. ತಂತಿ ಬಿದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ. ಕಲಾವಿದರು ಅಲ್ಪದರದಲ್ಲೇ ಅಪಾಯದಿಂದ ಪಾರಾದರು.
ಸ್ಟುಡಿಯೋದಲ್ಲಿ ಇತ್ತೀಚೆಗೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸೆಟ್ಗೆ ಬೆಂಕಿ ಹರಡಿ ಅವಘಡ ಸಂಭವಿಸಿತ್ತು. ಈಗ ಅಪಘಾತ ಸಂಭವಿಸಿರುವುದು ಚಿತ್ರತಂಡಕ್ಕೆ ಭೀತಿ ಮೂಡಿಸಿದೆ. (ದಿಗ್ವಿಜಯ ನ್ಯೂಸ್)