

ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಅ.27 ರಂದು ಸಂಜೆ 6.30ಕ್ಕೆ ‘ನಾಯಿ ಬಂತ್ರಪ್ರೋ ನಾಯಿ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ನಟನ ಮಂಜು ನಿರ್ದೇಶನದಲ್ಲಿ ನಟನ ರಂಗಶಾಲೆಯ ಮಕ್ಕಳು ಪ್ರಸ್ತುತ ಪಡಿಸಲಿದ್ದಾರೆ. ನಾಟಕವು ಇಂದಿನ ಕಾಲದಲ್ಲಿ ಕೂಡ ಮೂಢನಂಬಿಕೆಯನ್ನು ಜನರು ಯಾವ ರೀತಿ ನಂಬಿ ಅದರ ಬೆನ್ನತ್ತಿದ್ದಾರೆ ಎಂಬುವುದನ್ನು ತಿಳಿಹೇಳುತ್ತದೆ.
ಒಬ್ಬ ಮುಗ್ಧ ವ್ಯಕ್ತಿಯನ್ನು ಆತನ ಮಿತ್ರರು ಯಾವ ರೀತಿ ಕಾಡಿ ಕಾಡಿ ಮಜಾ ತೆಗೆದುಕೊಳ್ಳುತ್ತಾರೆ. ಅವನಿಗೆ ಸರಿಯಾದ ಮಾರ್ಗದರ್ಶನ ನೀಡದೆ ಸೂಕ್ತ ವೈದ್ಯರ ಹತ್ತಿರ ತೋರಿಸದೇ ನಾಟಿ ಔಷಧಗಳನ್ನು ಕೊಡಿಸುವುದು, ಮಂತ್ರ ಹಾಕಿಸಿ ಆತನನ್ನು ಹುಚ್ಚನಂತೆ ಮಾಡಿ ಬಿಡುತ್ತಾರೆ. ಮೂಢನಂಬಿಕೆಯನ್ನು ಯಾರೂ ನಂಬಬಾರದು ಎಂದು ಹಾಸ್ಯದ ಮೂಲಕ ಸಂದೇಶ ಸಾರುವ ನಾಟಕ ಇದಾಗಿದೆ.