ನಾಗರತ್ನ ಅವಿರೋಧ ಆಯ್ಕೆ

IMG-20241016-WA0111
ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಾಗರತ್ನ ಅವರನ್ನು ಅಭಿನಂದಿಸಲಾಯಿತು.
Published on

ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ನಾಗರತ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಮ್ಯಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣೆಯಲ್ಲಿ ಗ್ರಾಪಂ ಸದಸ್ಯೆ ನಾಗರತ್ನ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಕೃಷ್ಣಮೂರ್ತಿ ಘೋಷಣೆ ಮಾಡಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಜಾತಾವಾಸು, ಮಾಜಿ ಅಧ್ಯಕ್ಷ ಆರ್.ಎಸ್. ವಿಜಯ್ ಕುಮಾರ್, ಎ.ಎಸ್. ಪೂರ್ಣಿಮಾ, ಸದಸ್ಯರಾದ ನೇತ್ರಾವತಿ, ಮಲ್ಲೇಶ್ ಶಿವಕುಮಾರಿ, ಶ್ರೀಕಂಠ ಆರಾಧ್ಯ, ಸುಜಾತಾ, ಎಸ್. ನಂದೀಶ್, ಎಸ್.ಸಿ.ರಮ್ಯಾ, ಆಶಿಯಾ, ಶಶಿಧರ್, ಮಾದೇವ್, ಪಿಡಿಒ ಮಲ್ಲೇಶ್, ಕಾರ್ಯದರ್ಶಿ ಬಸವರಾಜ್, ದಿನೇಶ್, ಆರ್.ಪಿ. ಗಿರಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net