

ಭದ್ರಾವತಿ: ಬೆಂಗಳೂರಿನ ರಾಜರಾಜೇಶ್ವರಿ ನಗರದ ಓಂಕಾರಾಶ್ರಮದ ಸತ್ಸಂಗ ಭವನದಲ್ಲಿ ಆಯೋಜಿಸಿದ್ದ 43ನೇ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗಕೇಂದ್ರದ ಯೋಗಪಟು ಡಿ.ನಾಗರಾಜ್ 60 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ.
ಅ. 28ರಂದು ಜಾರ್ಖಂಡ್‌ನ ರಾಂಚಿಯಲ್ಲಿ ಆಯೋಜಿಸಿರುವ 43ನೇ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಯೋಗಸ್ಪರ್ಧೆಗೆ ಆಯ್ಕೆಯಾದ ನಾಗರಾಜ್ ಅವರಿಗೆ ಕರ್ನಾಟಕ ರಾಜ್ಯ ಯೋಗ ಸಂಸ್ಥೆ ಗೌರವ ಕಾರ್ಯದರ್ಶಿ ಡಿ.ಪುಟ್ಟೇಗೌಡ ಅವರು ಬೆಳ್ಳಿಪದಕ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಯೋಗ ಸಂಸ್ಥೆ ಪ್ರಮುಖರಾದ ಎಲ್.ಎಸ್.ಈಶ್ವರ್, ಕೆ.ಗೋವಿಂದರಾವ್ ಉಪಸ್ಥಿತರಿದ್ದರು.