ನಗರಾಭಿವೃದ್ಧಿ ಇಲಾಖೆಯಲ್ಲಿ ಮುಂಬಡ್ತಿ ನೀಡಿ, ಮೂರು ತಿಂಗಳಾದರೂ ಸ್ಥಳ ನಿಯೋಜನೆಗೆ ಸಿಗದ ಭಾಗ್ಯ

Published on

ಬೆಂಗಳೂರು:
ನಗರಾಭಿವೃದ್ಧಿ ಇಲಾಖೆಯಡಿ ಬರುವ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಡಿ 13 ಜನ ಸಹಾಯಕ ನಿರ್ದೇಶಕರಿಗೆ ಉಪ ನಿರ್ದೇಶಕ ಹುದ್ದೆಗಳಿಗೆ ಮುಂಬಡ್ತಿ ನೀಡಿದ್ದರೂ, ಕಳೆದ ಮೂರು ತಿಂಗಳಿಂದಲೂ ಇನ್ನೂ ಸ್ಥಳ ನಿಯುಕ್ತಿಗೊಳಿಸಿಲ್ಲ.
ಜೂ.20 ರಂದು ನಡೆದ ಪರಿಶೀಲನಾ ಸಭೆಯಲ್ಲಿ ಮುಂಬಡ್ತಿ ನೀಡಿದ್ದು, ಇನ್ನೂ ಸೂಕ್ತ ಜವಾಬ್ದಾರಿ ವಹಿಸಿಲ್ಲ. ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳ ನಿಯೋಜಿಸುವ ಜವಾಬ್ದಾರಿಯನ್ನೇ ಮರೆತಿರುವುದು ಅಚ್ಚರಿ.
ಸಚಿವ ಭೈರತಿ ಸುರೇಶ್ ಅವರು ಇಲಾಖೆ ಬಗ್ಗೆ ಕಾಳಜಿ ವಹಿಸಿದ್ದರಿಂದ ಬಡ್ತಿ ಸಮಸ್ಯೆ ಬಗೆಹರಿದಿತ್ತು.
ಮುಡಾ ಪ್ರಕರಣ ಹಿನ್ನೆಲೆಯಲ್ಲಿ ಸಚಿವರು ಮತ್ತು ಅಧಿಕಾರಿಗಳು ಇಲಾಖೆಯ ಕಾರ್ಯನಿರ್ವಹಣೆ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಬಡ್ತಿ ಪರಿಶೀಲನಾ ಸಭೆ ನಡೆಯುವುದು ಸಹ ವಿಳಂಬವಾಗಿತ್ತು. ಇಲಾಖೆಯಡಿ ಕೆಲವೇ ಕೆಲವು ಉಪ ನಿರ್ದೇಶಕರ ಹುದ್ದೆಗಳಿದ್ದು, ಇವುಗಳಿಗೆ ಸ್ಥಳ ನಿಯೋಜನೆ ಆಗಿಲ್ಲ. ಖಾಲಿ ಇರುವ ಉಪ ನಿರ್ದೇಶಕರ ಹುದ್ದೆಗಳು ಆಯಾಕಟ್ಟಿನ ಜಾಗಗಳಾಗಿದ್ದು, ವ್ಯವಹಾರ ಕುದುರದ ಕಾರಣ ಜವಾಬ್ದಾರಿ ವಹಿಸುವುದು ವಿಳಂಬವಾಗಿದೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಕೂಡಲೇ ಸ್ಥಳ ನಿಯೋಜಿಸಿ ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿರುವ ನಷ್ಟವನ್ನು ತಪ್ಪಿಸಬೇಕು ಎಂಬುದು ಇಲಾಖೆ ಅಧಿಕಾರಿಗಳ ಒತ್ತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net