ನಾಗರ ಕಟ್ಟೆಗೆ ಹಾಲಿನ ನೈವೇಧ್ಯ

ನಾಗರ ಪಂಚಾಮಿ ದೆವದುರ್ಗ
ದೇವದುರ್ಗ ಬಾಪೂಜಿ ಓಣಿಯಲ್ಲಿ ನಾಗರ ಪಂಚಮಿ ನಿಮಿತ್ತ ಮಹಿಳೆಯರು ನಾಗರಮೂರ್ತಿಗೆ ಹಾಲೆರೆದರು.
Published on

ದೇವದುರ್ಗ: ನಾಗರ ಪಂಚಮಿ ಅಂಗವಾಗಿ ಸೋಮವಾರ ತಾಲೂಕಾದ್ಯಂತ ನಾಗರ ಮೂರ್ತಿಗಳಿಗೆ ಹಾಲು ಎರೆಯುವ ಮೂಲಕ ಹಬ್ಬವನ್ನು ಮಹಿಳೆಯರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಮಹಿಳೆಯರು, ಮಕ್ಕಳು ಇಲ್ಲಿನ ಬೆಟ್ಟದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ಶ್ರೀಅಂಬಾಭವಾನಿ ದೇವಸ್ಥಾನ, ಶ್ರೀಸಿದ್ದರಾಮೇಶ್ವರ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಕ್ಕೆ ತೆರಳಿ ಹಾಲು ಎರೆದರು.

ಹೋಳಿಗೆ, ಕಡಬು, ಕರ್ಜೆಕಾಯಿ, ಕಡಲೆ ಹುಂಡಿ ಸೇರಿ ವಿವಿಧ ಸಿಹಿ ನೈವೇಧ್ಯೆ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net