

ಶಿರಸಿ: ಹಿಂದೂಗಳ ಪವಿತ್ರ ಹಬ್ಬವಾದ ನಾಗರ ಪಂಚಮಿ ಹಬ್ಬವನ್ನು ಸೋಮವಾರ ತಾಲೂಕಿನಾದ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಶಿರಸಿಯ ಪ್ರಶಾಂತ್ ಹುಲೇಕಲ್ ಅವರು ನಿಜ ನಾಗರಕ್ಕೆ ಹಾಲೆರದು ಪೂಜೆಸಲ್ಲಿಸುವ ಮೂಲಕ ವಿನೂತನವಾಗಿ ನಾಗರ ಪಂಚಮಿ ಹಬ್ಬವನ್ನು ಆಚರಿಸಿದರು.
ಪ್ರತಿ ವರ್ಷ ತಮ್ಮ ಕುಟುಂಬದ ಜೊತೆ ನಿಜ ನಾಗರಕ್ಕೆ ಹಾಲೆರದು ಪೂಜೆ ಸಲ್ಲಿಸುವ ಇವರು ಹಾವಿನ ರಕ್ಷಣೆಗಾಗಿ ಹಾವುಗಳಿಂದ ಪರಿಸರಕ್ಕೆ ಆಗುವ ಲಾಭಗಳನ್ನು ಜನರಿಗೆ ತಿಳಿಸುತ್ತಿದ್ದಾರೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ ನಾಗರ ಶಿಲೆ ಹಾಗೂ ಹುತ್ತಗಳಿಗೆ ಹಾಲೇರದು ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.
ನಗರದ ನಿಲೇಕಣಿ ಯಲ್ಲಿರುವ ಪ್ರಸಿದ್ಧ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುಂಜಾನೆ ಯಿಂದಲೆ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪುನೀತ ರಾದರು.