VIDEO: ವೈರಲ್ ಆಯ್ತು ಪೊಲೀಸರ No-Laugh Challenge; ವಿಡಿಯೋ ನೋಡಿ ಖುಷಿಯಾದ ಸಚಿವ!

No-Laugh Challenge
Published on

ಕೊಹಿಮಾ: ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಪೊಲೀಸರಿಗೆ ಅಗ್ರಸ್ಥಾನ. ಇದೀಗ ನಾಗಾಲ್ಯಾಂಡ್​ನ ಪೊಲೀಸರ ತಂಡವೊಂದು ಬಿಡುವಿನ ವೇಳೆಯಲ್ಲಿ ನೊ ಲಾಫ್​ (No-Laugh Challenge) ಚಾಲೆಂಜ್ ಮಾಡಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನಾಗಾಲ್ಯಾಂಡ್​ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತೆಮ್ಜೆನ್ ಇಮ್ನಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ 12 ಜನ ಪೊಲೀಸರ ತಂಡ 'ನೊ ಲಾಫ್' ಚಾಲೆಂಜ್​ ಆಟ ಆಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. ಒಬ್ಬೊಬ್ಬರಾಗಿ ಕೈಲಾಶ್ ಖೇರ್ ಅವರ ಪ್ರಸಿದ್ಧ 'ಸೈಯಾನ್' ಹಾಡನ್ನು ಹಾಡಿದ್ದಾರೆ. ಈ ವೇಳೆ ಯಾರು ನಗುತ್ತಾರೋ ಅವರ ತಲೆಗೆ ಎಲ್ಲರೂ ಕಾಗದದ ಕೋಲಿನಿಂದ ಹೊಡಯಬೇಕು ಎಂಬುವುದು ಆಟದ ನಿಯಮ.

ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಈ ವಿಡಿಯೋ ನಿಮ್ಮಲ್ಲಿ ಖಂಡಿತವಾಗಿಯೂ ನಗು ತರಿಸುತ್ತದೆ. ಜೀವನದಲ್ಲಿ ಕೆಲಸದ ಕಾರಣದಿಂದ ಎಷ್ಟೇ ಒತ್ತಡ ನಿರ್ಮಾಣವಾದರೂ, ಮಾನಸಿಕವಾಗಿ ಶಕ್ತಿಯುತವಾಗಿರಲು ಪ್ರಯತ್ನಿಸಬೇಕು. ನಮ್ಮ ರಾಜ್ಯದ ಪೊಲೀಸರ ಈ ವಿಡಿಯೋ ನೋಡಲು ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net