ನಾಗಚೈತನ್ಯ ಡೇಟಿಂಗ್ ವದಂತಿ; ಅವರನ್ನ ಮದುವೆ ಆಗೋದೇ ನನ್ನ ಗುರಿ; ನಟಿಯ ಹೇಳಿಕೆಗೆ ಶಾಕ್‌ ಆದ ನೆಟ್ಟಿಗರು

nnn
Published on

ಲಾಲ್ ಸಿಂಗ್ ಚಡ್ಡಾ ಪ್ರಚಾರದ ಸಮಯದಲ್ಲಿ ನಾಗ ಚೈತನ್ಯ ಅವರು ಶೋಭಿತಾ ಅವರೊಂದಿಗಿನ ವದಂತಿಯ ಸಂಬಂಧದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದರು. ಈ ವಿಚಾರ ಕೇಳಿ ನನಗೆ ನಗು ಬರುತ್ತದೆ ಎಂದಿದ್ದರು.


ಇದೀಗ ನಟಿ ರಿತು ಚೌಧರಿ ಕೂಡ ಚೈತನ್ಯ ಜೊತೆ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಾಗಚೈತನ್ಯರನ್ನು ಇಷ್ಟಪಡುವುದಾಗಿ ಹೇಳಿದ್ದಾರಂತೆ. ನಾಗಚೈತನ್ಯರನ್ನು ಮದುವೆಯಾಗುವುದು ತನ್ನ ಗುರಿಯಾಗಿದೆ ಎಂದು ಹೇಳಿದರು ಎನ್ನಲಾಗಿದೆ. ಗೋರಿಂಟಾಕು ಧಾರಾವಾಹಿ ಮತ್ತು ಜಬರ್ದಸ್ತ್ ಶೋ ದಲ್ಲಿನ ಅಭಿನಯದ ಮೂಲಕ ರಿತು ಖ್ಯಾತಿಯನ್ನು ಗಳಿಸಿದರು. ಗೋರಿಂಟಾಕು ಚಿತ್ರದಲ್ಲಿ ರಿತು ಗಾಯತ್ರಿ ಪಾತ್ರವನ್ನು ನಿರ್ವಹಿಸಿದ್ದಾರೆ.


ತೆಲುಗು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. 2021 ರಲ್ಲಿ ಸಮಂತಾ ರುತ್ ಪ್ರಭು ಜೊತೆ ವಿಚ್ಛೇದನ ಪಡೆದರು. ಆ ಬಳಿಕ ಇಬ್ಬರ ಮದುವೆ ವಿಚಾರವಾಗಿ ಅನೇಕ ಊಹಾಪೋಹಗಳು ಹಬ್ಬಿವೆ.


ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ನಾಗಚೈತನ್ಯ ಡೇಟಿಂಗ್ ವದಂತಿಗಳು ಮತ್ತು ನಂತರ ಮತ್ತೊಬ್ಬ ಹುಡುಗಿಯ ಜೊತೆ ಎರಡನೇ ಮದುವೆಯ ವದಂತಿಗಳು ಹರಿದಾಡುತ್ತಿವೆ.


ಈ ಎಲ್ಲದರ ಮಧ್ಯೆ ನಟಿಯೊಬ್ಬರು ನಾಗಚೈತನ್ಯ ಅವರನ್ನ ಮದುವೆ ಆಗುವುದೇ ನನ್ನ ಟಾರ್ಗೆಟ್‌ ಎಂದಿದ್ಧಾರೆ ನಟಿ ರಿತು ಚೌಧರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net