ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ನಾಗ ಚೈತನ್ಯ, ಶೋಭಿತಾ ದಂಪತಿ..Naga Chaitanya-Sobhita

Naga Chaitanya & sobhita Dhulipala (1)
Published on

ಹೈದ್ರಾಬಾದ್​: (Naga Chaitanya-Sobhita) ವರ್ಷದ ಕೊನೆಯ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೆಲುಗು ಚಿತ್ರರಂಗದ ದಂತಕಥೆ ಅಕ್ಕಿನೇನಿ ನಾಗೇಶ್ವರ ರಾವ್ ಅವರನ್ನು ಹೊಗಳಿದರು. ಈ ಹಿನ್ನೆಲೆಯಲ್ಲಿ ನಾಗ ಚೈತನ್ಯ ಹಾಗೂ ಶೋಭಿತಾ ಕೂಡ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಮನ್ ಕಿ ಬಾತ್​​ನಲ್ಲಿ ಮಾತನಾಡಿದ  ಮೋದಿ ಅವರು,  ಅಕ್ಕಿನೇನಿ ನಾಗೇಶ್ವರ ರಾವ್ ಅವರು ತಮ್ಮ ಚಲನಚಿತ್ರಗಳಲ್ಲಿ ಭಾರತೀಯ ಸಂಪ್ರದಾಯಗಳು ಮತ್ತು ಮೌಲ್ಯಗಳಿಗೆ ಸರಿಯಾದ ಸ್ಥಾನವನ್ನು ನೀಡುವ ಮೂಲಕ ತೆಲುಗು ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಅಕ್ಕಿನೇನಿ ನಾಗೇಶ್ವರ ರಾವ್ ಕೂಡ ತಮ್ಮ ಸಿನಿಮಾಗಳಲ್ಲಿ ಮಾನವೀಯ ಮೌಲ್ಯಗಳನ್ನು ವ್ಯಕ್ತಪಡಿಸಿದ್ದಾರೆ. ಈಗ ಜಗತ್ತಿನ ಎಲ್ಲಾ ದೇಶಗಳು ಭಾರತೀಯ ಚಿತ್ರರಂಗದತ್ತ ನೋಡುತ್ತಿವೆ. ಈ ಕಾರ್ಯಕ್ರಮದಲ್ಲಿ ಅಕ್ಕಿನೇನಿ ಜೊತೆಗೆ ರಾಜ್ ಕಪೂರ್, ಮೊಹಮ್ಮದ್ ರಫಿ ಮತ್ತು ತಪನ್ ಸಿನ್ಹಾ ಅವರ ಸೇವೆಯನ್ನು ಮೋದಿ ಸ್ಮರಿಸಿದರು. ನಮ್ಮ ಚಿತ್ರಗಳು ವಿಶ್ವದಾದ್ಯಂತ ದಾಖಲೆಗಳನ್ನು ಸೃಷ್ಟಿಸುತ್ತಿವೆ ಮತ್ತು ಪ್ರಶಸ್ತಿಗಳನ್ನು ಗೆಲ್ಲುತ್ತಿವೆ ಎಂದು ಮೋದಿ ಹೇಳಿದರು.

ಮೋದಿ ಅವರು ಶ್ಲಾಘಿಸುತ್ತಿದ್ದಂತೆ  ಕಿಂಗ್ ನಾಗಾರ್ಜುನ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ನನ್ನ ತಂದೆ ಅಯ್ಯನಾರ್ ಅವರ ಶತಮಾನೋತ್ಸವದಂದು ಐಕಾನಿಕ್ ದಂತಕಥೆಗಳ ಜೊತೆಗೆ ಅವರನ್ನು ಗೌರವಿಸಲು ಸಂತೋಷವಾಗಿದೆ ಎಂದು ನಾಗಾರ್ಜುನ ಹೇಳಿದರು.

ಅಕ್ಕಿನೇನಿ ನಾಗೇಶ್ವರ ರಾವ್ ಅವರ ಕಲಾತ್ಮಕತೆ ಮತ್ತು ತೆಲುಗು ಚಿತ್ರರಂಗದ ಬೆಳವಣಿಗೆಗೆ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಲು ತುಂಬಾ ಸಂತೋಷವಾಗಿದೆ. ನಿಮ್ಮಿಂದ ಮೆಚ್ಚುಗೆ ಪಡೆಯಲು ನಾವು ಅದೃಷ್ಟವಂತರು. ತುಂಬಾ ಧನ್ಯವಾದಗಳು" ಎಂದು ನಾಗ ಚೈತನ್ಯ ಮತ್ತು ಸೋಭಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ನಾಗ ಚೈತನ್ಯ ಹಾಗೂ ಶೋಭಿತಾ ಕೂಡ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net