ನನ್ನ ಜೀವನದಲ್ಲಿ ಸೃಷ್ಟಿಯಾದ ಶೂನ್ಯವನ್ನು ಶೋಭಿತಾ ತುಂಬುತ್ತಾಳೆ! Naga Chaitanya

Sobhita Dhulipala
Published on

ಹೈದರಾಬಾದ್​​: ಟಾಲಿವುಡ್​​ ನಟ ನಾಗ ಚೈತನ್ಯ ( Naga Chaitanya) ಹಾಗೂ ಸೋಭಿತಾ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ವಿಚಾರ ಗೊತ್ತೇ ಇದೆ. ಇತ್ತೀಚೆಗೆ ಗೋವಾದಲ್ಲಿ ನಡೆದ IIFA ಆಚರಣೆಯಲ್ಲಿ  ಇಡೀ ಅಕ್ಕಿನೇನಿ ಕುಟುಂಬ ಉಪಸ್ಥಿತರಿದ್ದರು. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಗ ಚೈತನ್ಯ ತಮ್ಮ ಮದುವೆ ಮತ್ತು ಸೋಭಿತಾ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

ಸಮಂತಾ ಜೊತೆಗಿನ ವಿಚ್ಛೇದನದ ನಂತರ, ಸೋಭಿತಾಳನ್ನು ಪ್ರೀತಿಸುತ್ತಿದ್ದ ನಾಗ ಚೈತನ್ಯ ಇದೇ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಈಗಾಗಲೇ ಮದುವೆಯ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ನಾಗ ಚೈತನ್ಯ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಮದುವೆ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯಲಿದೆ.ಅನ್ನಪೂರ್ಣ ಸ್ಟುಡಿಯೋ ನಮ್ಮ ಕುಟುಂಬಕ್ಕೆ ತುಂಬಾ ವಿಶೇಷವಾಗಿದೆ. ಅದಕ್ಕಾಗಿಯೇ ಮದುವೆ ಅಲ್ಲಿಯೇ ನಡೆಯುತ್ತದೆ. ಸ್ಟುಡಿಯೋದಲ್ಲಿರುವ ಅಜ್ಜನ ಪ್ರತಿಮೆಯ ಮುಂದೆ ನಮ್ಮ ಮದುವೆ ನಡೆಯಲಿದೆ. ಎರಡೂ ಕುಟುಂಬದ ಸದಸ್ಯರನ್ನು ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ.

ನಾನು ಶೋಭಿತಾ ಜತೆ ಚೆನ್ನಾಗಿದ್ದೇನೆ. ಅವಳು ನನ್ನನ್ನು ತುಂಬಾ ಅರ್ಥಮಾಡಿಕೊಂಡಿದ್ದಾಳೆ. ನನ್ನ ಜೀವನದಲ್ಲಿ ಸೃಷ್ಟಿಯಾದ ಶೂನ್ಯವನ್ನು ಅವರು ತುಂಬುತ್ತಾರೆ ಎಂಬ ನಂಬಿಕೆ ಇದೆ. ನಾನು ಸೋಭಿತಾ ಅವರೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಲು ಮತ್ತು ಒಟ್ಟಿಗೆ ಜೀವನವನ್ನು ಆಚರಿಸಲು ಎದುರು ನೋಡುತ್ತಿದ್ದೇನೆಂದು ಚೈತು ಸೋಭಿತಾರನ್ನು ಈ ರೇಂಜ್ ನಲ್ಲಿ ಹೊಗಳಿದ್ದು ಸಖತ್​​ ವೈರಲ್​ ಆಗುತ್ತಿದೆ.

ನಾಗಾ ಚೈತನ್ಯ - ಸೋಭಿತಾ ಮದುವೆ ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ಎರಡೂ ಕುಟುಂಬ ಸದಸ್ಯರು ಮತ್ತು ಕೆಲವು ಸಂಬಂಧಿಕರ ಸಮ್ಮುಖದಲ್ಲಿ ನಡೆಯಲಿದೆ ಎಂದು ನಾಗಾರ್ಜುನ್ ಇತ್ತೀಚೆಗೆ ಹೇಳಿದ್ದಾರೆ. ಸದ್ಯ ನಾಗ ಚೈತನ್ಯ ತಾಂಡೇಲ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಫೆಬ್ರವರಿ 7 ರಂದು ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net