ತಂದೆಯ ಹಾದಿಯಲ್ಲೇ ನಾಗಚೈತನ್ಯ 2ನೇ ಮದ್ವೆಗೆ ರೆಡಿ, ಸ್ಯಾಮ್​​ ಕಥೆ ಏನು?

Samantha
Published on

ಹೈದ್ರಾಬಾದ್:  ಚಿತ್ರರಂಗದಲ್ಲಿ ಮದುವೆ, ವಿಚ್ಛೇದನ ಸರ್ವೇ ಸಾಮಾನ್ಯ..ಪ್ರೀತಿಯಲ್ಲಿ ಬಿದ್ದಷ್ಟು ಬೇಗ ಬೇರ್ಪಡುತ್ತಿದ್ದಾರೆ.   ಈಗ ಅಕ್ಕಿನೇನಿ ಕುಟುಂಬದ ಮದುವೆಯ ಸುದ್ದಿ ಕೂಡ ಹೈಲೈಟ್ ಆಗಲಿದೆ. ನಾಗಾರ್ಜುನ ಎರಡನೇ ಮದುವೆಯಾಗಿದ್ದು, ಈಗ ನಾಗ ಚೈತನ್ಯ ಕೂಡ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ.

ಟಾಲಿವುಡ್​​ ನಟ ಅಕ್ಕಿನೇನಿ ನಾಗ ಚೈತನ್ಯ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಗಾರ್ಜುನ  ಅವರ ಮಗನ ನಿಶ್ಚಿತಾರ್ಥದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಹೊಸ ಜೋಡಿಗೆ ಶುಭಕೊರಿದ್ದಾರೆ. 

ನಾಗಾರ್ಜುನ ಅವರು ಮೊದಲು ಲಕ್ಷ್ಮೀ ದಗ್ಗುಬಾಟಿ ಅವರನ್ನು ಮದುವೆಯಾಗಿದ್ದರು. 1984ರಲ್ಲಿ ನಡೆದಿದ್ದ ಈ ಮದುವೆ ಅರೇಂಜ್ ಮ್ಯಾರೇಜ್ ಆಗಿತ್ತು. ನಾಗಾರ್ಜುನ ತಂದೆ ನಾಗೇಶ್ವರ್ ರಾವ್, ಲಕ್ಷ್ಮೀ ತಂದೆ ರಾಮನಾಯ್ಡು ದಗ್ಗುಬಾಟಿ ಸ್ನೇಹಿತರಾಗಿದ್ದರು. 1986ರಲ್ಲಿ ಲಕ್ಷ್ಮೀ ಅವರು ನಾಗಚೈತನ್ಯಗೆ ಜನ್ಮ ನೀಡಿದರು. 1990ರಲ್ಲಿ ಈ ದಂಪತಿ ಮನಸ್ತಾಪದಿಂದ ವಿಚ್ಛೇದನ ಪಡೆದರು.  ಆ ಸಮಯದಲ್ಲಿಯೇ ನಾಗಾರ್ಜುನ ಅವರು ನಟಿ ಅಮಲಾ ಜೊತೆ ಹೆಚ್ಚು ಸಿನಿಮಾ ಮಾಡುತ್ತಿದ್ದರು. ಅವರಿಬ್ಬರು ಪ್ರೀತಿಯಲ್ಲಿ ಬಿದ್ದು, 1992ರಲ್ಲಿ ಮದುವೆಯಾದರು. 1994ರಲ್ಲಿ ಅಮಲಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಅಖಿಲ್ ಎಂದು ಹೆಸರು ಇಟ್ಟಿದ್ದಾರೆ. ಅಖಿಲ್ ಹಾಗೂ ನಾಗಚೈತನ್ಯ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ.

ನಾಗಾರ್ಜುನ ಅವರ ಮಗ ನಾಗಚೈತನ್ಯ ಚಿತ್ರವೊಂದರ ಮೂಲಕ ಸಮಂತಾ ಅವರನ್ನು ಪ್ರೀತಿಸಿದ ಚೈತು ಕೆಲಕಾಲ ಗುಟ್ಟಾಗಿ ಪ್ರೀತಿ ಇಟ್ಟುಕೊಂಡು ಇಬ್ಬರು ಹಿರಿಯರ ಸಮ್ಮುಖದಲ್ಲಿ ಮದುವೆಯಾದರು.ಸೌತ್ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ಸಮಂತಾ ಮದುವೆಯ ನಂತರ ಸ್ವಲ್ಪ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ ಅವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯಾದ ಸ್ವಲ್ಪ ಸಮಯದ ನಂತರ ಹಿತಾಸಕ್ತಿ ಘರ್ಷಣೆಯಿಂದ ನ್ಯಾಯಾಲಯದ ಮೂಲಕ ವಿಚ್ಛೇದನ ಪಡೆದು ನೋಡಿಕೊಂಡರು. ಸದ್ಯ ಸಿನಿಮಾದಿಂದ ದೂರವಿದ್ದು, ಆರೋಗ್ಯದ ಕಡೆ ಗಮನ ಹರಿಸಿದ್ದಾರೆ.

ವಿಚ್ಛೇದನದ ನಂತರ ನಾಗಚೈತನ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಸಮಂತಾಗೆ ಮಾರಣಾಂತಿಕ ಕಾಯಿಲೆ ಬಂದು ಸಾವಿನ ಅಂಚಿಗೆ ಹೋಗಿ ದೇವರ ದಯೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮಂತಾಗೆ ಸೌತ್ ಆಫರ್ ಗಳು ಬರದಿದ್ದರೂ ಬಾಲಿವುಡ್ ನಿಂದ ಭರ್ಜರಿ ಆಫರ್ ಗಳು ಬರುತ್ತಿವೆ. ಈ ಹಿಂದೆ, ಫ್ಯಾಮಿಲಿ ಮ್ಯಾನ್ 2 ಸರಣಿಯ ಭಾಗವಾಗಿದ್ದ ಸಮಂತಾ, ಆ ಚಿತ್ರದ ನಿರ್ದೇಶಕರಾದ ರಾಜ್ ಮತ್ತು ಡಿಕೆ ಅವರೊಂದಿಗೆ ಮತ್ತೊಂದು ಸರಣಿಯನ್ನು ಮಾಡಿದರು. ಹಾಲಿವುಡ್‌ನ ಸಿಟಾಡೆಲ್‌ನ ರಿಮೇಕ್‌ನಲ್ಲಿ ಸಮಂತಾ ನಟಿಸಿದ್ದಾರೆ. 

ಸಮಂತಾ ಜೊತೆಗಿನ ವಿಚ್ಛೇದನದ ನಂತರ ನಾಗಚೈತನ್ಯ ನಟಿ ಸೋಭಿತಾ ಧೂಳಿಪಾಲರನ್ನು ಪ್ರೀತಿಸುತ್ತಿದ್ದರು. ಇವರಿಬ್ಬರು ಹೆಚ್ಚಾಗಿ ಜೋಡಿಯಾಗಿ ಕಾಣಿಸಿಕೊಳ್ಳುವುದರಿಂದ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಚೈತು ಆದರೆ ಶೋಭಿತಾ ಈ ಬಗ್ಗೆ ಬಾಯಿ ಬಿಟ್ಟಿಲ್ಲ.  ವೈಯಕ್ತಿಕ ವಿಚಾರಗಳಲ್ಲಿ ಖಾಸಗಿತನ ಬೇಕು ಎಂದು ಈ ಸುದ್ದಿಯನ್ನು ಗುಟ್ಟಾಗಿಯೆ ಇಟ್ಟಿದ್ದರು. ಆದರೆ ಅಂತಿಮವಾಗಿ ಇಂದು ಎರಡೂ ಕುಟುಂಬಗಳು ಸೇರಿ ಈ ಜೋಡಿಗೆ ನಿಶ್ಚಿತಾರ್ಥ ಮಾಡಿದೆ.

ಇಂದು ಬೆಳಗ್ಗೆ 9.42ಕ್ಕೆ ಎರಡೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿತು. ಶೋಭಿತಾ ಅವರನ್ನು ಆತ್ಮೀಯವಾಗಿ ಕುಟುಂಬಕ್ಕೆ ಆಹ್ವಾನಿಸುತ್ತೇನೆ ಎಂದು ನಾಗಾರ್ಜುನ ಟ್ವೀಟ್ ಮಾಡುವ ಮೂಲಕ ಚೈತು ಅವರ ಎರಡನೇ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.

ಸಮಂತಾ ಎರಡನೇ ಬಾರಿಗೆ ಯಾವಾಗ ಮದುವೆಯಾಗುತ್ತಾರೆಯೇ? ಎಂದು ಎಲ್ಲಾ ಅಭಿಮಾನಿಗಳು ಮಾತನಾಡಲು ಪ್ರಾರಂಭಿಸಿದರು. ನಾಗಚೈತನ್ಯ ಅವರು ತಂಗೆ ನಾಗಾರ್ಜುನ್​ ಅವರಂತೆ 2ನೇ ಮದುವೆಗೆ ಖುಷಿಯಿಂದ ಹೆಜ್ಜೆ ಇಟ್ಟಿದ್ದಾರೆ. ಸ್ಯಾಮ್​​ ಕೂಡಾ ಹೊಸ ಜೀವನ ಶುರು ಮಾಡುತ್ತಾರಾ? ಎಂದು ಫ್ಯಾನ್ಸ್​​ ಸೋಶಿಯಲ್​​ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net