

ಹೈದರಾಬಾದ್: ಹೈದರಾಬಾದ್ನ ಐಕಾನಿಕ್ ಎಂದೇ ಫೇಮಸ್ ಆಗಿರುವ ಅನ್ನಪೂರ್ಣ ಸ್ಟೂಡಿಯೋದಲ್ಲಿ ಸೌತ್ ಸ್ಟಾರ್ ಅಕ್ಕಿನೇನಿ ನಾಗಚೈತನ್ಯ- ಸೋಭಿತಾ ಧೂಳಿಪಾಳ(Naga Chaitanya & sobhita Dhulipala) ಇದೇ ಡಿ.4 ರಂದು ಮದುವೆ ನಡೆಯಲಿದೆ. ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲಿಡುವ ಈ ಇಬ್ಬರ ಬಹು ನಿರೀಕ್ಷಿತ ಮದುವೆಗೆ ಟಾಲಿವುಡ್ ಅಂಗಳದಲ್ಲಿ ಕ್ಷಣಗಣನೆ ಶುರುವಾಗಿದೆ.
ಇದೆಲ್ಲದರ ನಡುವೆ ಸೋಭಿತಾ ಧೂಳಿಪಾಳ ಅವರ ನಿವ್ವಳ ಆಸ್ತಿ ಬಗ್ಗೆ ವರದಿಯೊಂದು ಬಹಿರಂಗಗೊಳಿಸಿದೆ. ಅಲ್ಲದೆ, ಸಿನಿಮಾ ಮತ್ತು ಕಾರ್ಯಗಳಿಗೆ ಸೋಭಿತಾ ಭಾಗವಹಿದರೆ ಎಷ್ಟು ಚಾರ್ಚ್ ಮಾಡುತ್ತಾರೆ ಎಂದು ವರದಿ ಉಲ್ಲೇಖಿಸಿದೆ.
''ಆಂಧ್ರಪ್ರದೇಶದ ತೆನಾಲಿಯಲ್ಲಿ ಜನಿಸಿದ ಶೋಭಿತಾ ಅವರು 2013ರಲ್ಲಿ ಮಿಸ್ ಇಂಡಿಯಾ ಅರ್ಥ್ ಫ್ಯಾಷನ್ನಲ್ಲಿ ಭಾಗವಹಿಸಿ ಅದನ್ನು ಗೆದ್ದುಕೊಂಡರು. ಅಲ್ಲಿಂದ ಅವರ ಖ್ಯಾತಿ ಹೆಚ್ಚಿಸಿತು. ಅಲ್ಲದೆ, ಮಾಡಲಿಂಗ್ಗೆ ಬರುವುದಕ್ಕೆ ಇದು ದಾರಿ ಮಾಡಿಕೊಟ್ಟಿತ್ತು. 2016ರಲ್ಲಿ ರಮಣ್ ರಾಘವ್ 2.0 ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಗೂಢಚಾರಿ ಮತ್ತು ದಿ ನೈಟ್ ಮ್ಯಾನೇಜರ್ ಚಿತ್ರಗಳಲ್ಲಿ ನಟಿಸುವ ಮೂಲಕ ಮುನ್ನೆಲೆಗೆ ಬಂದರು. ತಮಿಳಿನ ಪೊನ್ನಿಯಮ್ ಸೆಲ್ವಮ್ ಸರಣಿ ಸಿನಿಮಾ ಅವರಿಗೆ ಹಿಟ್ ಕೊಟ್ಟಿದೆ''.
32 ವಯಸ್ಸಿನ ಸೋಭಿತಾ ಅವರ ಆಸ್ತಿ ಒಟ್ಟು 7 ರಿಂದ 10 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅಲ್ಲದೆ, ಪ್ರತಿ ಚಿತ್ರದಲ್ಲಿ ನಟಿಸಲು 70 ಲಕ್ಷ ರೂ. ದಿಂದ 1 ಕೋಟಿ ರೂ. ಚಾರ್ಚ್ ಮಾಡುತ್ತಾರೆ ಎಂದು ವರದಿ ಉಲ್ಲೇಖಿಸಿದೆ. ನಾಗಚೈತನ್ಯ ಮತ್ತು ಸೋಭಿತಾಳ ಒಟ್ಟು ಆಸ್ತಿ 160 ಕೋಟಿ. ರೂ ಇದೆ ಎಂದು ಅಂದಾಜಿಸಲಾಗಿದೆ.
ಇನ್ನು ಈಗಾಗಲೇ ವಧು ವರ ಕುಟುಂಬಗಳು ಹೈದರಾಬಾದ್ನಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು, ಸೋಭಿತಾ ತವರು ಮನೆ ವಿಶಾಖಪಟ್ಟಂನಲ್ಲಿ ತೆಲುಗು ಸಾಂಪ್ರದಾಯದಂತೆ 'ಪಸುಪು ದಂಚನಂ'(ಹರಿಶಿನಿ ಕಾರ್ಯ) ಮತ್ತು 'ಜಿಲಾಕರ್ರ ಬೆಲ್ಲಂ' ಸೇರಿದಂತೆ ಮದುವೆಯ ಮುನ್ನ ನಡೆಯುವ ವಿವಿಧ ಶಾಸ್ತ್ರಗಳು ನೆರವೇರಿವೆ. ಡಿ.4ರಂದು ಈ ಇಬ್ಬರ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿ?
ಸೋಭಿತಾ ಅವರ ಕುಟುಂಬದ ಸದಸ್ಯರು ಸೇರಿದಂತೆ ಅಕ್ಕಿನೇನಿ ಮತ್ತು ದಗ್ಗುಬಾಟಿ ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ. ಜತೆಗೆ ಸಿನಿ ರಂಗದ ಪ್ರಮುಖರು ಮಾತ್ರ ಪಾಲ್ಗೊಳಲಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)