ನಾಗ ಚೈತನ್ಯ-ಶೋಭಿತಾಳ ಡೆಸ್ಟಿನೇಷನ್ ವೆಡ್ಡಿಂಗ್! ಯಾವಾಗ ಮತ್ತು ಎಲ್ಲಿ?

Naga Chaitanya, Sobhita Dhulipala
Published on

ಹೈದ್ರಾಬಾದ್​: ನಾಗಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಆಗಸ್ಟ್ 8 ರಂದು  ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹೈದರಾಬಾದ್‌ನಲ್ಲಿರುವ ಅಕ್ಕಿನೇನಿ ನಾಗಾರ್ಜುನ ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಆಪ್ತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಅಂದಿನಿಂದ, ಚೈತನ್ಯ ಮತ್ತು ಸೋಬಿತಾಳ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ನಿಶ್ಚಿತಾರ್ಥದ ನಂತರ, ನಾಗ ಚೈತನ್ಯ ಮತ್ತು ಸೋಭಿತಾ ಮತ್ತೆ ತಮ್ಮ ವೃತ್ತಿಪರ ಜೀವನದಲ್ಲಿ ಬ್ಯುಸಿಯಾದರು. ತಮ್ಮ ಸಿನಿಮಾಗಳನ್ನು ಬೇಗ ಮುಗಿಸುವ ಕೆಲಸ ಆರಂಭಿಸಿದರು. ಮದುವೆಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಅಕ್ಕಿನೇನಿ ನಾಗಾರ್ಜುನ್ ಇತ್ತೀಚೆಗೆ ತಮ್ಮ ಮದುವೆಯ ಬಗ್ಗೆ ಹೇಳಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚೈತನ್ಯ ಹಾಗೂ ಸೋಬಿತಾಳ ಮದುವೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ನಾಗ ಚೈತನ್ಯ ಮತ್ತು ಶೋಭಿತಾ ತಮ್ಮ ಡೆಸ್ಟಿನೇಶನ್ ವೆಡ್ಡಿಂಗ್‌ಗೆ ಸೂಕ್ತ ಸ್ಥಳವನ್ನು ಹುಡುಕುತ್ತಿರುವಂತೆ ತೋರುತ್ತಿದೆ. ಅವರ ಮದುವೆ ಹೈದರಾಬಾದ್ ಅಥವಾ ರಾಜಸ್ಥಾನದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಇವು ಸಾಧ್ಯವಾಗದಿದ್ದರೆ ವಿದೇಶದಲ್ಲಿ ಅದ್ಧೂರಿಯಾಗಿ ಮದುವೆಗೆ ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ನಾಗ ಚೈತನ್ಯ ಮತ್ತು ಸೋಭಿತಾ ಅವರ ಮದುವೆ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಆದರೆ ಸದ್ಯಕ್ಕೆ ಇವೆಲ್ಲಾ ವದಂತಿಗಳಷ್ಟೇ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net