

ನವದೆಹಲಿ: ಕೃಷಿ ಕ್ಷೇತ್ರದ ಸುಧಾರಣೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಪರಿಷ್ಕೃತ ಕಾನೂನುಗಳನ್ನು ಕಾಂಗ್ರೆಸ್ಸಿಗರು ವಿರೋಧಿಸುತ್ತಿರುವ ಕಾರಣ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ರಾಹುಲ್ ಗಾಂಧಿ ಅವರ ಹಳೆಯ ಭಾಷಣದ ವಿಡಿಯೋವನ್ನು ಟ್ವೀಟ್ ಮಾಡಿ ಕೇಳಿದ್ದಿಷ್ಟು -
ಇದೇನು ಜಾದೂ ಮಾಡ್ತಾ ಇದ್ದೀರಿ ರಾಹುಲ್ ಜೀ!, ಈ ಹಿಂದೆ ರೈತರ ಪರವಾಗಿ ಮಾತನಾಡಿದ್ದ ತಾವು ಇದೀಗ ಅದಕ್ಕೆ ತದ್ವಿರುದ್ಧವಾದ ವಾದ ಪ್ರತಿಪಾದನೆ ಮಾಡುತ್ತಿದ್ದೀರಿ. ದೇಶ ಅಥವಾ ರೈತರ ಹಿತಾಸಕ್ತಿ ಸಂಭಂಧಿಸಿ ನೀವು ಮಾಡುವಂಥದ್ದು ಏನೂ ಇಲ್ಲ. ರಾಜಕೀಯವನ್ನಷ್ಟೇ ಮಾಡಿ. ಆದರೆ, ನಿಮ್ಮ ದುರದೃಷ್ಟ ನೋಡಿ, ನಿಮ್ಮ ಬೂಟಾಟಿಕೆಗಳು ಯಾವುದೂ ಕೆಲಸ ಮಾಡುತ್ತಿಲ್ಲ. ನಿಮ್ಮ ದ್ವಂದ್ವ ನೀತಿಗಳನ್ನು ದೇಶದ ಜನರು, ರೈತರು ಅರ್ಥಮಾಡಿಕೊಂಡಿದ್ದಾರೆ ಎಂದು ಜೆ.ಪಿ.ನಡ್ಡಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದರ ಜತೆಗೊಂಡು ವಿಡಿಯೋ ಇದ್ದು, ಅದು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಆಲೂಬೆಳಗಾರರ ಪರವಾಗಿ ಮಾತನಾಡಿದ ದೃಶ್ಯವನ್ನು ಹೊಂದಿದೆ. ಅದರಲ್ಲಿ ಅವರು, ಪೊಟ್ಯಾಟೊ ಚಿಪ್ಸ್ ಮ್ಯಾಜಿಕ್ ಕುರಿತು ಮಾತನಾಡಿದ್ದಾರೆ. ಆಲೂ ಬೆಳೆಗಾರರಿಗೆ ಕಿಲೋ ಆಲೂಗಡ್ಡೆಗೆ 2 ರೂಪಾಯಿ ಸಿಕ್ಕರೆ, ಅದನ್ನು ಚಿಪ್ಸ್ ಮಾಡಿ ಮಾರಾಟ ಮಾಡುವವರಿಗೆ ಚಿಕ್ಕ ಪ್ಯಾಕೆಟ್ ಚಿಪ್ಸ್ಗೆ 10 ರೂಪಾಯಿ ಸಿಗುತ್ತಿದೆ. ಇದ್ಯಾವ ಮ್ಯಾಜಿಕ್ ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..