ಪಂಚ ಪ್ರಾಣಗಳ ಹತೋಟಿ ಸಾಧಿಸುವ ನಾಡಿ ಶುದ್ಧಿ ಪ್ರಾಣಾಯಾಮ

Naadi Shuddi
Published on

ವಿಷ್ಣು ಮುದ್ರೆಯು ಪ್ರಾಣಾಯಾಮ ವಿದ್ಯಾರ್ಥಿಯು ಎದುರಿಸುವ ಮೊದಲ ಯೋಗದ ಕೈಸನ್ನೆಯಾಗಿದೆ. ಇದನ್ನು ನಾಡಿ ಶೋಧನಾ ಎಂದು ಕರೆಯುತ್ತಾರೆ. ಈ ವಿಚಿತ್ರವಾದ ಕೈ ರಚನೆಯು ಯೋಗ ಮುದ್ರೆಯಾಗಿದ್ದು ಅದು ವಿಷ್ಣು ಮುದ್ರೆ ಎಂದು ಹೆಸರಾಗಿದೆ.

Yogakshema vvani
ಒಂದು ಅಥವಾ ಎರಡೂ ಮೂಗಿನ ಹೊಳ್ಳೆಗಳನ್ನು ನಿರ್ಬಂಧಿಸಿರುವ ಉಸಿರಾಟದ ತಂತ್ರಗಳಲ್ಲಿ ವಿಷ್ಣು ಮುದ್ರೆಯನ್ನು ಬಳಸಲಾಗುತ್ತದೆ. ಇದು ಚಂದ್ರ ಅಥವಾ ಸೂರ್ಯ ಭೇದನ (ಸೂರ್ಯ/ಚಂದ್ರನ ಉಸಿರಾಟ) ಅಥವಾ ನಾಡಿ ಶೋಧನ (ಪರ್ಯಾಯ ಮೂಗಿನ ಹೊಳ್ಳೆ ಉಸಿರಾಟ) ದಂತಹ ಏಕ ಮೂಗಿನ ಹೊಳ್ಳೆಯ ಯೋಗ ಉಸಿರಾಟವಾಗಿದೆ.

ಈ ಯೋಗ ಮುದ್ರೆಯನ್ನು ಮೂಲತಃ ನಾಸಿಕ ಮುದ್ರೆ ಎಂದು ಕರೆಯಲಾಗುತ್ತಿತ್ತು. ನಾಸಿಕ ಎಂಬುದು ಸಂಸ್ಕೃತ ಪದ. ಅಂದರೆ ಮೂಗಿನ ಹೊಳ್ಳೆಗಳು. ಇದನ್ನು ಪರ್ಯಾಯ ಮೂಗಿನ ಉಸಿರಾಟದಲ್ಲಿ ಬಳಸಲಾಗುತ್ತದೆ. ಇದು ಎಡ/ಬಲ ಮಿದುಳಿನ ಅರ್ಧಗೋಳಗಳನ್ನು ಸಮತೋಲನಗೊಳಿಸುತ್ತದೆ.

ವಿಧಾನ: ಯಾವುದಾದರೊಂದು ಆಸನದಲ್ಲಿ ಕುಳಿತು ಬೆನ್ನು ಕುತ್ತಿಗೆ ನೇರಮಾಡಿ ಎಡಗೆೈಯಲ್ಲಿ ಚಿನ್ಮುದ್ರೆ ಮಾಡಿ. ಅನಂತರ ಬಲ ಕೈಯ ತೋರು ಬೆರಳು ಮತ್ತು ಮಧ್ಯದ ಬೆರಳನ್ನು ಮಡಚಿ ಹಸ್ತವನ್ನು ಮೂಗಿನೆಡೆಗೆ ತಂದು ಬಲಗೈ ಹೆಬ್ಬೆರಳನ್ನು ಮೂಗಿನ ಬಲ ಹೊಳ್ಳೆಯ ಮೇಲೆ ಹೊರಭಾಗದಲ್ಲಿ ಯಾ (ರ್ಸ³ಸಲು ಉಪಯೋಗ) ಕಿರುಬೆರಳು ಮತ್ತು ಉಂಗುರ ಬೆರಳನ್ನು ಮೂಗಿನ ಎಡ ಬದಿಯ ಹೊಳ್ಳೆಯ ಹೊರಭಾಗದಲ್ಲಿ ಇರಿಸಿ. ಇಲ್ಲಿ ನಾಡೀ ಶುದ್ಧಿ ಪ್ರಾಣಾಯಾಮವನ್ನು ಈ ರೀತಿ ಅಭ್ಯಾಸ ಮಾಡಿ. ಎಡ ಕೈ ‘ಚಿನ್ಮುದ್ರೆ’ ಬಲ ಕೈ ‘ನಾಸಿಕ ಮುದ್ರೆ’. ಈಗ ‘ನಾಸಿಕ ಮುದ್ರೆ’ಯಲ್ಲಿ ಮೂಗಿನ ಬಲಬದಿಯನ್ನು ಹೆಬ್ಬೆರಳಿನಿಂದ ಮುಚ್ಚಿ. ಎಡ ಬದಿ ಹೊಳ್ಳೆಯಿಂದ ನಿಧಾನವಾಗಿ, ನಿಶ್ಯಬ್ಧವಾಗಿ ದೀರ್ಘವಾಗಿ ಉಸಿರನ್ನು ಒಳಕ್ಕೆ ಎಳೆದುಕೊಳ್ಳಿ. ಆಮೇಲೆ ಎಡಬದಿಯನ್ನು ಕಿರುಬೆರಳಿನಿಂದ ಮತ್ತು ಉಂಗುರ ಬೆರಳಿನಿಂದ ಮುಚ್ಚಿ ಮೂಗಿನ ಬಲಹೊಳ್ಳೆಯಿಂದ ಪೂರ್ತಿಯಾಗಿ ಉಸಿರನ್ನು ಹೊರಕ್ಕೆ ಬಿಡಿ. ಅನಂತರ ಬಲಬದಿಯ ಮೂಗಿನಿಂದ ಉಸಿರನ್ನು ತೆಗೆದುಕೊಂಡು ಬಲ ಮೂಗನ್ನು ಮುಚ್ಚಿ ಎಡಬದಿಯ ಮೂಗಿನಿಂದ ಉಸಿರನ್ನು ಪೂರ್ತಿ ಹೊರಕ್ಕೆ ಬಿಡಿ. ಈಗ ಒಂದು ಸುತ್ತು ನಾಡಿ ಶುದ್ಧಿ ಪ್ರಾಣಾಯಾಮ ಪೂರ್ತಿಯಾಯಿತು.

ಈ ರೀತಿ ಆರಂಭದಲ್ಲಿ 3 ಅಥವಾ 6 ಅಥವಾ 9 ಆಮೇಲೆ 21 ಬಾರಿಯವರೆಗೆ ಪರಿಣತಿ ಪಡೆದುಕೊಂಡು ಅಭ್ಯಾಸ ಮಾಡಿ. ಅನಂತರ ವಿಶ್ರಾಂತಿ ಪಡೆಯಿರಿ. ಈ ಪ್ರಾಣಾಯಾಮದಲ್ಲಿ ಮನಸ್ಸನ್ನು ಪೂರ್ತಿ ಉಸಿರಾಟದಲ್ಲಿ ಇರಿಸಬೇಕು.

ನಾಡಿಶುದ್ಧಿ ಪ್ರಾಣಾಯಾಮದ ಪ್ರಯೋಜನ: ಅನುಲೋಮ ವಿಲೋಮ, ಸೂರ್ಯಾನುಲೋಮ, ಚಂದ್ರಾನುಲೋಮ, ನಾಡೀಶುದ್ಧಿ ಮುಂತಾದ ಪ್ರಾಣಾಯಾಮಗಳಲ್ಲಿ ಉಚ್ಛಾಸ ನಿಶ್ವಾಸಗಳಿಗಾಗಿ ಮೂಗಿನ ಹೊಳ್ಳೆಗಳನ್ನು ಬದಲಾಯಿಸಲು ಈ ಮುದ್ರೆ ಉಪಯುಕ್ತವಾಗಿದೆ.

* ನಾಸಿಕ ಮುದ್ರೆಯಲ್ಲಿ ನಾಡಿ ಶುದ್ಧಿ ಪ್ರಾಣಾಯಾಮ ಅಭ್ಯಾಸ ಮಾಡುವುದರಿಂದ ದೇಹದಲ್ಲಿರುವ ಸೂಕ್ಷ್ಮ ವಾಯು ನಾಳಗಳು (ನಾಡಿಗಳು) ಶುದ್ಧಗೊಳ್ಳುತ್ತದೆ.

* ದೇಹ ಹಗುರವಾಗಿ ಮನಸ್ಸು ಪ್ರಶಾಂತಗೊಳ್ಳುತ್ತದೆ ಹಾಗೂ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ.

* ಅಸ್ತಮಾ, ಅಲರ್ಜಿ, ರಕ್ತದೊತ್ತಡದ ಸಮಸ್ಯೆಗಳ ನಿವಾರಣೆಗೆ ನಾಡಿ ಶುದ್ಧಿ ಪ್ರಾಣಾಯಾಮ ಸಹಕಾರಿಯಾಗುತ್ತದೆ.

ಕೈಯ ಬೆರಳುಗಳನ್ನು ವ್ಯವಸ್ಥಿತ ಭಂಗಿಯಲ್ಲಿ ಜೋಡಿಸುವ ಕ್ರಿಯೆಯೇ ಮುದ್ರೆ. ನಮ್ಮ ದೇಹವು ಪಂಚಭೂತಗಳಿಂದ ರಚನೆಯಾಗಿದೆ. ಕೈಯಲ್ಲಿನ ಐದು ಬೆರಳುಗಳು ಪಂಚಭೂತಗಳನ್ನು ಪ್ರತಿನಿಧಿಸುತ್ತವೆ ಹಾಗೂ ಪ್ರತಿಯೊಂದು ಬೆರಳು ತನ್ನದೇ ಆದ ಶಕ್ತಿ ಚೈತನ್ಯವನ್ನು ಹೊಂದಿದೆ. ಎಲ್ಲಾ ಬೆರಳುಗಳೂ ಚೇತನದಾಯಕ ಹಾಗೂ ಅವು ದೇಹಕ್ಕೆ ಹೊಸ ಚೈತನ್ಯವನ್ನು ತುಂಬುತ್ತವೆ.

ವಿಶೇಷ ಸೂಚನೆ: ಮುದ್ರೆಗಳನ್ನು ಗುರುವಿನ ಮಾರ್ಗದರ್ಶನ, ಸಲಹೆ ಪಡೆದು ಅಭ್ಯಾಸ ಮಾಡಿ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net