VIDEO | ರಾಜಸ್ಥಾನ-ಮಧ್ಯಪ್ರದೇಶ ಎರಡರಲ್ಲೂ ಭರ್ಜರಿ ಮುನ್ನಡೆ ಸಾಧಿಸಿದ್ದೇವೆ: ಆರ್​.ಪಿ. ಸಿಂಗ್​

Untitled design (7)
Published on

ರಾಜಸ್ಥಾನ: ಇಂದು ಬೆಳಗ್ಗಿನಿಂದಲೇ ಆರಂಭಗೊಂಡ ವಿಧಾನಸಭಾ ಚುನಾವಣಾ ಫಲಿತಾಂಶ 2023ರ ಮತಎಣಿಕೆ ಪ್ರಕ್ರಿಯೆಯಲ್ಲಿ ಇದೀಗ ಬಹುಪಾಲು ಗೆಲುವು ಯಾರಿಗಿದೆ ಎಂಬುದು ಇದೀಗ ಸ್ಪಷ್ಟವಾಗಿ ತಿಳಿದುಬಂದಿದೆ. ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ಚುನಾವಣಾ ಫಲಿತಾಂಶಗಳು ಚುನಾವಣಾ ಫಲಿತಾಂಶ ಹೊರಬಂದಿದ್ದು, ಡಿಸೆಂಬರ್ 4 ರಂದು ಮಿಜೋರಾಂ ರಿಸಲ್ಟ್​ ಪ್ರಕಟವಾಗಲಿದೆ.

ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದು, ಈ ಬಗ್ಗೆ ಬಿಜೆಪಿ ನಾಯಕ, ರಾಷ್ಟ್ರೀಯ ವಕ್ತಾರರಾದ ಆರ್.ಪಿ ಸಿಂಗ್​ ಮಾತನಾಡಿ, "ರಾಜಸ್ಥಾನದಲ್ಲಿ ನಾವು 119 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ ಹಾಗೂ ಮಧ್ಯಪ್ರದೇಶದಲ್ಲೂ ಪ್ರಮುಖ ಮುನ್ನಡೆ ಸಾಧಿಸಿದ್ದೇವೆ. ಆರಂಭಿಕ ಪ್ರವೃತ್ತಿಗಳು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಪರವಾಗಿವೆ" ಎಂದು ಸಿಂಗ್ ಸಂತಸದಿಂದ ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net