

ಬೆಂಗಳೂರು: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ನಟ ಕಿಚ್ಚ ಸುದೀಪ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಎನ್. ಕುಮಾರ್, ನಿರ್ಮಾಪಕರ ತಂಡದೊಂದಿಗೆ ಫಿಲ್ಮ್ ಚೇಂಬರ್ ಕಛೇರಿ ಬಳಿ ಕುಳಿತು ಧರಣಿ ನಡೆಸುತ್ತಿದ್ದಾರೆ.
ಫಿಲ್ಮ್ ಚೇಂಬರ್ ಮುಂದೆ ಬೀಡು ಬಿಟ್ಟ ನಿರ್ಮಾಪಕರ ತಂಡ, ನಾವು ಡಾ. ಶಿವರಾಜ್ಕುಮಾರ್ ಅವರನ್ನು ಇಂದು ಭೇಟಿ ಮಾಡದೆ ಸ್ಥಳದಿಂದ ಕದಲುವುದಿಲ್ಲ. ಒಂದು ವೇಳೆ ಶಿವಣ್ಣ ಬರಲು ವಿಫಲವಾದರೆ, ಚಾಪೆ, ದಿಂಬು ತಂದು ನಾಳೆಯಿಂದ ವಾಣಿಜ್ಯ ಮಂಡಳಿಯಲ್ಲೇ ವಾಸ್ತವ್ಯ ಹೂಡುತ್ತೇವೆ ಎಂದು ನಿರ್ಮಾಪಕ ಎನ್. ಕುಮಾರ್ ಹೇಳಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಕಛೇರಿ ಮುಂದೆ ಹಲವು ನಿರ್ಮಾಪಕರು ಹಾಜರಾಗುತ್ತಿದ್ದು, ನಟ ಶಿವರಾಜ್ಕುಮಾರ್ ಅವರ ಆಗಮನಕ್ಕೆ ಕಾದು ಕುಳಿತ್ತಿದ್ದಾರೆ. ಸದ್ಯ ಮೈಸೂರಿನಲ್ಲಿರುವ ಶಿವಣ್ಣ, ಸ್ಥಳಕ್ಕೆ ಭೇಟಿ ನೀಡಲಿದ್ದಾರ ಎಂಬುದು ಇನ್ನೂ ತಿಳಿದುಬಂದಿಲ್ಲ.