More

    ಕಾಯಕದಿಂದ ದೇಶ ಅಭಿವೃದ್ಧಿ ಸಾಧ್ಯ: ನಿವೃತ್ತ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿ

    ಕಂಪ್ಲಿ: ಶರಣರು ಜಾತಿಗೆ ಸೀಮಿತರಾಗದೆ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದು ನಿವೃತ್ತ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿ ಹೇಳಿದರು.

    ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಭಾನುವಾರ ತಾಲೂಕು ಶರಣ ಸಾಹಿತ್ಯ ಪರಿಷತ್ ಆಯೋಜಿಸಿದ್ದ 156ನೇ ಮಹಾಮನೆ ಕಾರ್ಯಕ್ರಮದಲ್ಲಿ ಶರಣರ ಲಕ್ಷಣ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ನುಡಿಯಂತೆ ನಡೆದುಕೊಂಡು ಶರಣರ ಬದುಕು ಆದರ್ಶ ಮತ್ತು ಅನುಕರಣೀಯವಾಗಿದೆ. ಕಾಯಕದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಜ್ಞಾನಗಳಿಕೆಯಿಂದ ಯಾರೂ ವಿಮುಖರಾಗಬಾರದು ಎಂದರು.

    ಜ್ಞಾನಾರ್ಜನೆಗಾಗಿ ಮೊಬೈಲ್ ಬಳಸಿ

    ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಘನಮಠದಯ್ಯ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಮೊಬೈಲ್ ಬಳಕೆ ಮಾಡಿಕೊಳ್ಳಬೇಕು. ವಿನಹ ಮನೋರಂಜನೆಗಾಗಿ ಬಳಸಬಾರದು. ಮೊಬೈಲ್, ಅಂತರ್ಜಾಲ ವ್ಯವಸ್ಥೆ ವರವಾಗಬೇಕು ಹೊರತು ಶಾಪವಾಗಬಾರದು ಎಂದು ಸಲಹೆ ನೀಡಿದರು.

    ಇದನ್ನೂ ಓದಿ: ವಿಶ್ವ ಮಾನ್ಯತೆ ಪಡೆದ ವಚನ ಸಾಹಿತ್ಯ

    ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿದ್ದರು. ಪಾಠಶಾಲೆ ಅಧ್ಯಕ್ಷ ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಕವಿತಾಳ ಬಸವರಾಜ್, ಎಚ್.ನಾಗರಾಜ, ದಾನಶೆಟ್ಟಿ ಶಿವನಾಗಪ್ಪ, ಕೆ.ಚಂದ್ರಶೇಖರ್, ಕೆ.ಯಂಕಾರೆಡ್ಡಿ, ಎಲಿಗಾರ ವೆಂಕಟರೆಡ್ಡಿ, ಬಡಿಗೇರ ಜಿಲಾನ್‌ಸಾಬ್, ಯು.ಎಂ.ವಿದ್ಯಾಶಂಕರ್, ಸಂತೋಷ್ ಕೊಟ್ರಪ್ಪ ಸೋಗಿ, ಜೀರು ಮಲ್ಲಿಕಾರ್ಜುನ, ಅಶೋಕ ಕುಕನೂರು, ಮಡಿವಾಳ ಹುಲುಗಪ್ಪ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts