More

    ವಚನ ಸಾಹಿತ್ಯದಲ್ಲಿದೆ ಜೀವನ ವಿಕಾಸದ ತತ್ವ

    ಹುಮನಾಬಾದ್: ಶರಣರ ವಚನ ಸಾಹಿತ್ಯ ಮಾನವನ ಜೀವನದ ಸವರ್ಾಂಗೀಣ ವಿಕಾಸದ ತತ್ವ ಒಳಗೊಂಡಿದೆ. ಕಾರಣ ಎಲ್ಲ ಭಾಷೆಗಳಲ್ಲಿ ಇನ್ನೂ ಹೆಚ್ಚಿನ ಪ್ರಚಾರಕ್ಕೆ ಶರಣ ಸಾಹಿತ್ಯ ಪರಿಷತ್ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಹೇಳಿದರು.

    ಪಟ್ಟಣದ ಯಲಾಲ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಶರಣ ಸಾಹಿತ್ಯ ಪರಿಷತ್ ತಾಲೂಕು ನೂತನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಅತ್ಯಂತ ಶ್ರೀಮಂತಿಕೆಯಿಂದ ಕೂಡಿದ್ದು, ಇದರಲ್ಲಿ ಶರಣರ ವಚನ ಸಾಹಿತ್ಯದ ಪಾತ್ರ ಸಹ ಮಹತ್ವದಾಗಿದೆ ಎಂದರು.

    ಹಿರಿಯ ಶರಣ ಸಾಹಿತಿ ಡಾ.ಸೋಮನಾಥ ಯಾಳವಾರ ಅವರು ಸಾಹಿತಿ ಕರುಣ ಸಲಗರ ರಚಿತ ಚಿಂತನಲಹರಿ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ಶರಣ ಸಾಹಿತ್ಯದ ವ್ಯಾಪ್ತಿ ಹಿರಿದು. ಜನಸಾಮಾನ್ಯರ ಕನ್ನಡ ನುಡಿಯನ್ನು ಶರಣರು ಸಾಹಿತ್ಯದಲ್ಲಿ ಅಳವಡಿಸಿ ವಿಶ್ವಶ್ರೇಷ್ಠ ವಚನ ಸಾಹಿತ್ಯ ನೀಡಿದ್ದಾರೆ. ಶರಣ ಸಾಹಿತ್ಯ ಕನ್ನಡ ಸಾಹಿತ್ಯದ ಜೀವನಾಡಿ. ಎಲ್ಲ ಸಾಹಿತ್ಯ ಪ್ರಕಾರಕ್ಕೆ ಮೂಲ ಎಂದು ತಿಳಿಸಿದರು.

    ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ಪರಿಷತ್ತಿನ ಉದ್ದೇಶ, ಗುರಿ ಹಾಗೂ ಸಾಹಿತ್ಯದ ಅವಶ್ಯಕತೆಯನ್ನು ತಿಳಿಸಿದರು. ತಾಲೂಕು ಅಧ್ಯಕ್ಷ ಮಲ್ಲಿಕಾಜರ್ುನ ಸಂಗಮಕರ್ ಅಧ್ಯಕ್ಷತೆ ವಹಿಸಿದ್ದರು.

    ಸಕರ್ಾರಿ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದಶರ್ಿ ರೇವಣಸಿದ್ದಯ್ಯ ಮಠಪತಿ, ಸಾಹಿತಿ ಕರುಣ ಸಲಗರ, ಸಂಸ್ಥೆ ನಿದರ್ೇಶಕ ಪ್ರಜ್ವಲ ಯಲಾಲ್, ಪ್ರಮುಖರಾದ ಬಸವರಾಜ ರುದ್ರವಾಡಿ, ಸುಭಾಷ ವಾರದ, ಭಕ್ತರಾಜ ಚಿತಾಪುರೆ, ಶಾಂತವೀರ ಯಲಾಲ್, ಬಾಬುರಾವ ಪತರ್ಾಪುರ, ಗುರುರಾಜ ಬಟಗೇರಿ, ಸಂಗಮ್ಮ ಬೊಮ್ಮಣಿ, ಭಿಮಣ್ಣ ದೇವಣಿ, ಶ್ರೀಕಾಂತ ಸೂಗಿ, ವೀರಣ್ಣ ಕುಂಬಾರ, ಶಶಿಧರ ಪಾಟೀಲ್, ಅಶೋಕ ತುಪ್ಪದ, ಶೋಭಾ ಅವರಾದೆ, ಆರ್.ಎಂ.ಭಂಕಲಗಿ, ಗೀತಾ ರೆಡ್ಡಿ, ವಿಜಯಕುಮಾರ ಚೆಟ್ಟಿ, ಈಶ್ವರ ತಡೋಳ, ಮಲ್ಲಿಕಾಜರ್ುನ ರಟಕಲ್, ಶರಣಬಸಪ್ಪ ಪಾರಾ, ಸಿದ್ದಯ್ಯ ಸ್ವಾಮಿ, ಮಾಣಿಕರಾವ ಪಾಟೀಲ್ ಇತರರಿದ್ದರು. ಐ.ಎಸ್.ಶಕೀಲ್ ಸ್ವಾಗತಿಸಿದರು. ಬಾಬುರಾವ ಪಾಟೀಲ್ ನಿರೂಪಣೆ ಮಾಡಿದರು. ಕಾಶೀನಾಥ ಕೋಡ್ಲಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts