More

    ಸಂವಿಧಾನದಿಂದ ಸಾಮಾಜಿಕ ನ್ಯಾಯ

    ಹುಮನಾಬಾದ್: ಡಾ.ಬಾಬಾಸಾಹೇಬï ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಎಲ್ಲರಿಗೂ ಸಮಾನತೆ, ಸಾಮಾಜಿಕ ನ್ಯಾಯ ದೊರೆಯಲು ಸಾಧ್ಯವಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.

    ಡಾ.ಬಿ.ಆರ್.ಅಂಬೇಡ್ಕರ್‌ರ ೧೩೩ನೇ ಜಯಂತಿ ಉತ್ಸವ ನಿಮಿತ್ತ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಅಂಬೇಡ್ಕರ್ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಬೇಕೆಂದರು.

    ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಜಿಪಂ ಮಾಜಿ ಉಪಾಧ್ಯಕ್ಷ ಲಕ್ಮಣರಾವ ಬುಳ್ಳಾ, ತಾಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ, ರಾಜೀವಗಾಂಧಿ ವಸತಿ ನಿಗಮದ ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ಮಹೇಂದ್ರಕರ್, ಜಯಂತಿಯ ಉತ್ಸವದ ಅಧ್ಯಕ್ಷ ಲಕ್ಷ್ಮೀಪುತ್ರ ಮಳಾಗೆ, ಉಪಾಧ್ಯಕ್ಷ ಕಾನಿಫನಾಥ ಜಾನವೀರ, ಪ್ರಮುಖರಾದ ಧರ್ಮರಾಯ ಘಾಂಗ್ರೆ, ಪ್ರಭು ತಾಳಮಡಗಿ, ಸುರೇಶ ಘಾಂಗ್ರೆ, ಶಿವರಾಜ ಚೀನಕೇರಾ, ಅಫ್ಸರಮಿಯ್ಯಾ, ಓಂಕಾರ ತುಂಬಾ, ಉಮೇಶ ಜಮಗಿ, ವೀರಪ್ಪ ಧುಮ್ಮನಸೂರ ಇತರರಿದ್ದರು.

    ಬಡಮಕ್ಕಳಿಗೆ ಉಚಿತ ಕ್ಷೌರ ಸೇವೆ: ಧುಮ್ಮನಸೂರ ಗ್ರಾಮದ ಭೀಮನಗರ ಬಡಾವಣೆಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೩ನೇ ಜಯಂತಿ ನಿಮಿತ್ತ ಹಡಪದ ಅಪ್ಪಣ್ಣ ಸಮಾಜ ಸಂಘದಿಂದ ೧೩೩ ಬಡ ಮಕ್ಕಳಿಗೆ ಉಚಿತ ಕ್ಷೌರ ಸೇವೆ ಮಾಡಲಾಯಿತು. ಸಂಘದ ತಾಲೂಕು ಅಧ್ಯಕ್ಷ ಶಿವಶಂಕರ ಹಡಪದ ನೇತೃತ್ವದಲ್ಲಿ ಸಮಾಜದ ಇತರರು ಸೇರಿ ನಡೆಸಿದ ಕ್ಷೌರ ಸೇವೆಗೆ ಗ್ರಾಪಂ ಅಧ್ಯಕ್ಷ ವೀರಪ್ಪ ಭೂತಾಳೆ ಚಾಲನೆ ನೀಡಿ, ಹಡಪದ ಸಮಾಜದವರು ಬಡಮಕ್ಕಳಿಗೆ ಉಚಿತ ಕ್ಷೌರ ಸೇವೆ ನೀಡಿರುವುದು ಶ್ಲಾಘನೀಯವಾಗಿದೆ ಎಂದರು. ಸಮಾಜದ ಉಪಾಧ್ಯಕ್ಷ ಕಲ್ಲಪ್ಪ ಹಡಪದ ಹಣಕುಣಿ, ನಾಗೇಶ ಗಡವಂತಿ, ಅಮರ ಇಟ್ಟಗ, ಪ್ರಶಾಂತ ಧುಮ್ಮನಸೋರ, ಮಾಣಿಕ ಇಟ್ಟಗ, ಪರಮೇಶ್ವರ ಕೆ., ಸತೀಶ ಗಡವಂತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts