

ಮೈಸೂರು: ನಿರಂತರ ಮಳೆಗೆ ಒಲಂಪಿಯಾ ಚಿತ್ರಮಂದಿರದ ಹಿಂಬದಿಯ ಗೋಡೆ ದಿಢೀರ್ ಕುಸಿತಗೊಂಡಿದ್ದು, ಘಟನೆಯಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ನಾಲ್ವರಿಗೆ ಗಂಭೀರ ಗಾಯವಾಗಿದೆ. ಅವಘಡದಲ್ಲಿ ಇಬ್ಬರ ಪರಿಸ್ಥಿತಿ ತೀವ್ರ ಗಂಭೀರವಾಗಿದ್ದು, ಗಾಯಾಳುಗಳನ್ನು ಹತ್ತಿರದ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮಧ್ಯಾಹ್ನ 1.30ರ ಸುಮಾರಿಗೆ ಗೋಡೆ ಕುಸಿತಗೊಂಡಿದ್ದು, ತಬರೇಜ್ ಮತ್ತು ಅರ್ಮಾನ್ ಎಂಬ ವ್ಯಕ್ತಿಗಳು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪೋಲಿಸರು ದೌಡಾಯಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಕುಸಿದು ಬಿದ್ದಿರುವ ಗೋಡೆಯ ಅವಶೇಷಗಳ ಕೆಳಗೆ ಸಿಲುಕಿದ ಬಟ್ಟೆ ಅಂಗಡಿ ಸ್ಟಾಲ್ಗಳನ್ನು ತೆರವುಗೊಳಿಸುತ್ತಿದ್ದಾರೆ. ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ಮುಂದುವರೆದಿದೆ.