

ನವದೆಹಲಿ: ರಾಜಧಾನಿ ದೆಹಲಿಯ ರೋಹಿಣಿಯ ಕೋರ್ಟ್ನಲ್ಲಿ ಅನುಮಾನಾಸ್ಪದ ಸ್ಫೋಟವೊಂದು ಸಂಭವಿಸಿದೆ. ಈ ಘಟನೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಂದಿನ ನ್ಯಾಯಾಲಯದ ಎಲ್ಲಾ ಕಲಾಪಗಳನ್ನು ಅಮಾನತ್ತಿನಲ್ಲಿರಿಸಿ, ಆವರಣವನ್ನು ಸೀಲ್ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಆರಂಭಿಕ ವರದಿಗಳ ಪ್ರಕಾರ, ಬೆಳಿಗ್ಗೆ 10.40 ರ ಸಮಯಕ್ಕೆ ಕೋರ್ಟ್ ರೂಮೊಂದರಲ್ಲಿ ಒಂದು ಲ್ಯಾಪ್ಟಾಪ್ ಸ್ಫೋಟಗೊಂಡಿತು ಎನ್ನಲಾಗಿದೆ. ಪೊಲೀಸ್ ಇಲಾಖೆಯ ಮೂಲಗಳು ಇದು ಪುಟ್ಟ ಕ್ರೂಡ್ ಬಾಂಬ್ನ ಪರಿಣಾಮ ಎಂದು ಹೇಳಿದ್ದಾರೆ. ಫೊರೆನ್ಸಿಕ್ಸ್ ತಂಡದವರು ಪರಿಶೀಲನೆ ನಡೆಸಿದ ನಂತರ ವಸ್ತುಸ್ಥಿತಿ ಹೊರಬೀಳಲಿದೆ. ಅಗ್ನಿಶಾಮಕ ದಳದ ತಂಡಗಳು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)‘