ಮೈಸೂರಿನಲ್ಲಿ ಕುಲಷಿತ ನೀರು ಪ್ರಕರಣ; ಸರ್ಕಾರದ ವೈಲ್ಯವೇ ಕಾರಣ: ಬಿಜೆಪಿ

cm siddaramaiah
ಸಿಎಂ ಸಿದ್ದರಾಮಯ್ಯ
Published on

ಬೆಂಗಳೂರು:
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಕುಲಷಿತ ನೀರು ಕುಡಿದು ಮೃತಪಟ್ಟಿರುವ ಘಟನೆಗೆ ಸರ್ಕಾರದ ದಿವ್ಯ ನಿರ್ಲಕ್ಷ ಮತ್ತು ಆಡಳಿತ ವೈಲ್ಯವೇ ಕಾರಣ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆ.ಸಾಲುಂಡಿಯಲ್ಲಿ ನಡೆದಿರುವ ಈ ದುರ್ಘಟನೆಯಲ್ಲಿ 73 ಜನರು ಆಸ್ಪತ್ರೆ ಸೇರಿದ್ದಾರೆ. ಪಕ್ಕದ ಊರಿನಲ್ಲಿ ಜನರಿಗೆ ವಾಂತಿ ಭೇದಿ (ಕಾಲರಾ) ಕಾಣಿಸಿಕೊಂಡಿದೆ. ಡಿಎಚ್‌ಒಗೆ ದೂರು ನೀಡಿದ್ದರೂ ಗಮನ ಹರಿಸಿಲ್ಲ ಎಂದರು.
ಮಹದೇವಪ್ಪ ಅವರಂತ ಪ್ರಭಾವಿ ಸಚಿವರಿದ್ದರೂ, ಜಿಲ್ಲಾಡಳಿತವು ಕುಡಿಯುವ ನೀರಿನ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ಷೇಪಿಸಿದರು.
ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಯ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರನ್ನು ಕುಡಿದು 9 ಜನರು ಮೃತಪಟ್ಟ ಘಟನೆ ಕಣ್ಮುಂದೆ ಇದೆ. ತನಿಖೆ ಮಾಡಿದಾಗ ಕುಡಿಯುವ ನೀರಿಗೆ ಮನುಷ್ಯನ ಮಲ, ವಿಷಕಾರಿ ಅಂಶಗಳು ಸೇರಿತ್ತು ಎಂಬುದು ಬೆಳಕಿಗೆ ಬಂದಿತ್ತು ಎಂದರು.
ಮೈಸೂರಿನಲ್ಲಿ 18ನೇ ವಾರ್ಡಿನಲ್ಲಿ ಕೆ.ಸಾಲುಂಡಿ ಎಂಬಲ್ಲಿ ಕಲುಷಿತ ಚರಂಡಿ ನೀರು ಕುಡಿಯುವ ನೀರಿಗೆ ಸೇರುವ ಬಗ್ಗೆ ದೂರು ನೀಡಿದರೂ, ಕ್ರಮ ಕೈಗೊಳ್ಳಲಿಲ್ಲ ಎಂದರು.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮುಂದೆ ತಮಿಳುನಾಡು ಸರ್ಕಾರ ಹೋಗಿ ಮೇ ತಿಂಗಳ ಕೊನೆಯ ಒಳಗೆ ತಮಗೆ 6.5 ಟಿಎಂಸಿ ನೀರನ್ನು ಬಿಡಲು ಒತ್ತಾಯಿಸಿತ್ತು. ಕಳೆದ ಸಾಲಿನಲ್ಲಿ ಡಿ.ಕೆ.ಶಿವಕುಮಾರ್ ಮೈ ಮರೆತಂತೆ ಈ ಬಾರಿ ಮೈಮರೆಯಬಾರದು. ಕಳೆದ ಸಾರಿ 3-4 ಬಾರಿ ನೀರು ಬಿಟ್ಟ ಬಳಿಕ ಸರ್ವ ಪಕ್ಷಗಳ ಸಭೆ ಕರೆದಿದ್ದರು. ಈಗ ಆ ರೀತಿಯ ತಪ್ಪು ಮಾಡದೆ, ಪ್ರಾಧಿಕಾರದ ಮುಂದೆ ಸ್ಪಷ್ಟ ಅಂಕಿಅಂಶಗಳೊಂದಿಗೆ ವಾದ ಮಂಡಿಸಲು ಆಗ್ರಹಿಸಿದರು.
ಐಸಿಸಿ (ನೀರಾವರಿ ಸಲಹಾ ಸಮಿತಿ) ಸಭೆಯನ್ನು ಜುಲೈ ಬದಲಾಗಿ ಜೂನ್‌ನಲ್ಲೇ ಕರೆದು ಕಾಲುವೆ ಮತ್ತು ರೈತರಿಗೆ ನೀರು ಕೊಡಬೇಕು. ಕಾವೇರಿ ಕೊಳ್ಳ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.
ಮೇಕೆದಾಟು ಸಂಬಂಧ ಈಗಾಗಲೇ ಸಾಧ್ಯಾಸಾಧ್ಯತೆ ವರದಿ ಕೊಡಲಾಗಿದೆ. ಡಿಪಿಆರ್ ಆಗಿದೆ. ಬಿಜೆಪಿ ಸರಕಾರ 1 ಸಾವಿರ ಕೋಟಿ ಹಣ ಮೀಸಲಿಟ್ಟಿತ್ತು. ನನ್ನ ನೀರು ನನ್ನ ಹಕ್ಕು ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್, ಕೇಂದ್ರದ ಮೇಲೆ ಗೂಬೆ ಕೂರಿಸದೆ ಯೋಜನೆ ಜಾರಿ ಮಾಡಬೇಕು ಎಂದರು. ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net