

ಸೊರಬ: ತಾಲೂಕಿನ ಜಡೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 14 ವರ್ಷ ಮತ್ತು 17 ವರ್ಷದೊಳಗಿನ ಬಾಲಕ, ಬಾಲಕಿಯರ ವಾಲಿಬಾಲ್ ಕ್ರೀಡಾಕೂಟದ ಎಲ್ಲ ವಿಭಾಗಗಳಲ್ಲಿ ಮೈಸೂರು ವಿಭಾಗ ಪ್ರಥಮ ಸ್ಥಾನ ಗಳಿಸಿದೆ.
17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರು ವಿಭಾಗ ಪ್ರಥಮ, ಕಲಬುರಗಿ ದ್ವಿತೀಯ ಮತ್ತು ಬೆಳಗಾವಿ ತೃತೀಯ ಸ್ಥಾನ ಪಡೆದಿದೆ. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ ಪ್ರಥಮ, ಬೆಂಗಳೂರು ದ್ವಿತೀಯ ಮತ್ತು ಬೆಳಗಾವಿ ತೃತೀಯ ಸ್ಥಾನ ಗಳಿಸಿದೆ.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರು ವಿಭಾಗ ಪ್ರಥಮ, ಬೆಳಗಾವಿ ದ್ವಿತೀಯ ಹಾಗೂ ಕಲಬುರಗಿ ತೃತೀಯ ಸ್ಥಾನ ಗಳಿಸಿದೆ. 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ ಪ್ರಥಮ, ಕಲಬುರಗಿ ದ್ವಿತೀಯ ಮತ್ತು ಬೆಂಗಳೂರು ತೃತೀಯ ಸ್ಥಾನ ಗಳಿಸಿದೆ.
ಪಂದ್ಯಾವಳಿ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ದಯಾನಂದ ಕಲ್ಲೇರ್, ಮುಖ್ಯಶಿಕ್ಷಕ ಜಿ.ಆರ್.ಗಿರಿಧರ್, ಎಸ್‌ಡಿಎಂಸಿ ಅಧ್ಯಕ್ಷ ರಾಜಶೇಖರ ಸ್ವಾಮಿ, ಗ್ರಾಪಂ ಅಧ್ಯಕ್ಷ ಅಮಿತ್ ಗೌಡ, ಆರ್.ಟಿ.ಮಂಜುನಾಥ್ ಮತ್ತಿತರರು ಇದ್ದರು.