ಮಲೆನಾಡಿಗೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರ

Mysore MP Yaduveer Krishnadatta Wodeyar felicitation
ಶಿವಮೊಗ್ಗ ವಿನೋಬನಗರದಲ್ಲಿರುವ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅವರನ್ನು ರಾಘವೇಂದ್ರ ಹಾಗೂ ಅವರ ಪುತ್ರ ಬಿ.ಆರ್.ಸುಭಾಷ್ ಸನ್ಮಾನಿಸಿದರು.
Published on

ಶಿವಮೊಗ್ಗ: ಮಲೆನಾಡಿಗೆ ಮೈಸೂರು ಸಂಸ್ಥಾನದ ಅಪಾರ ಕೊಡುಗೆ ಇದೆ ಎಂದು ಸಂಸದ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಜರು ಪ್ರಾರಂಭಿಸಿದ ಅನೇಕ ಸಂಸ್ಥೆಗಳು ನೂರಾರು ವರ್ಷ ದಾಟಿ ಈಗಲೂ ನಾಗರಿಕರಿಗೆ ಯಶಸ್ವಿ ಸೇವೆ ನೀಡುತ್ತಿವೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಆನೇಕ ಯೋಜನೆ ರೂಪಿಸಿದರು. ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬೇಕು. ಅವರ ಅನೇಕ ದೊಡ್ಡ ಕೊಡುಗೆ ಈ ರಾಜ್ಯಕ್ಕಿದೆ ಎಂದರು.
ಮೈಸೂರು ಅರಸರು ಈ ನಾಡಿಗಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಆ ಕಾರಣಕ್ಕೆ ಜನರು ಇನ್ನೂ ಮೈಸೂರು ಮನೆತನದ ಬಗ್ಗೆ ಗೌರವ ತೋರುತ್ತಾರೆ. ಅದನ್ನು ನಾವೂ ಉಳಿಸಿಕೊಂಡು ಹೋಗುತ್ತೇವೆ ಎಂದ ಅವರು, ಮಲೆನಾಡಿನ ಜನ ಪುಣ್ಯವಂತರು. ಇಲ್ಲಿನ ವಾತಾವರಣ ನನಗೆ ತುಂಬಾ ಇಷ್ಟ. ನಾಲ್ವಡಿ ಕೃಷ್ಣರಾಜ ಒಡೆಯರ್ ಮಲೆನಾಡಿನ ಅನೇಕ ಭಾಗಗಳಲ್ಲಿ ಆಗಿನ ಕಾಲದಲ್ಲೇ ಪ್ರವಾಸಿ ಮಂದಿರ ಮಾಡಿದ್ದರು. ಅವೆಲ್ಲವೂ ಈಗ ಆನೇಕ ಜನರಿಗೆ ನೆರವು ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net