ಇಂದಿನಿಂದ ಚಿಕ್ಕದೇವಮ್ಮನ ಬೆಟ್ಟದಲ್ಲಿ ದೇವಿದರ್ಶನಕ್ಕೆ ಅವಕಾಶ

07-01
Published on

ಸರಗೂರು: ತಾಲೂಕಿನ ಶ್ರೀಚಿಕ್ಕದೇವಮ್ಮನವರ ಬೆಟ್ಟದಲ್ಲಿ ದೇವಿ ದರ್ಶನಕ್ಕೆ ಜೂನ್ 8ರಿಂದ ಅವಕಾಶ ಕಲ್ಪಿಸಲಾಗಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಲಾಕ್‌ಡೌನ್‌ನಿಂದ 75 ದಿನಗಳಿಂದ ದೇವಾಲಯವನ್ನು ಮುಚ್ಚಲಾಗಿತ್ತು. ಕೇಂದ್ರ ಸರ್ಕಾರ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿರುವುದರಿಂದ ಸೋಮವಾರದಿಂದ ಬೆಳಗ್ಗೆ 8 ಗಂಟೆಗೆ ತೆರೆದು ಸಂಜೆ 5ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಪರಸ್ಪರ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ ಬರಬೇಕು. ದೇವಾಲಯದ ಸಿಬ್ಬಂದಿ ಭಕ್ತರಿಗೆ ಸ್ಯಾನಿಟೈಸರ್ ನೀಡಬೇಕು ಥರ್ಮಲ್ ಸ್ಕ್ರೀನಿಂಗ್ ಮಾಡಿದ ನಂತರ ದರ್ಶನಕ್ಕೆ ಬಿಡಬೇಕು. ಭಕ್ತರು ಪೂಜಾ ಸಾಮಗ್ರಿಗಳನ್ನು ತರಬಾರದು, ಪೂಜೆ ಮಾಡುವುದಿಲ್ಲ. ತೀರ್ಥಪ್ರಸಾದ ನೀಡುವುದಿಲ್ಲ. ದರ್ಶನ ಪಡೆದ ಭಕ್ತರು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಬೆಟ್ಟದ ಮೇಲೆ ಕೂರುವುದಾಗಲಿ, ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ತಾಲೂಕು ಅಡಳಿತದ ಆದೇಶ ಪಾಲಿಸಿ ಭಕ್ತರು ಸಹಕರಿಸಿ ಎಂದು ಶ್ರೀಚಿಕ್ಕದೇವಮ್ಮನವರ ಬೆಟ್ಟದ ಪ್ರಧಾನ ಅರ್ಚಕ ಮಹದೇವಸ್ವಾಮಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net