ಮೈಸೂರು ಲ್ಯಾಂಪ್ಸ್ ಕಂಪನಿಯ ಆಸ್ತಿಯನ್ನ ಸರ್ಕಾರಿ ಉದ್ದೇಶಕ್ಕೆ ಬಳಸಿಕೊಳ್ಳಲು ಕ್ರಮ

Tourists visiting Mysore Palace
Published on


ಮೈಸೂರು ಲ್ಯಾಂಪ್ಸ್ ಲಿಮಿಟೆಡ್ ಆಸ್ತಿಯನ್ನ ಸರ್ಕಾರದ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು. ಇದನ್ನ ಖಾಸಗಿಯವರಿಗೆ ಅಥವಾ ಟ್ರಸ್ಟ್‌ಗೆ ಕೊಡುವ ಉದ್ದೇಶ ಇಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಜೆಡಿಎಸ್‌ನ ಬೋಜೇಗೌಡರ ಪ್ರಶ್ನೆಗೆ ಉತ್ತರಿಸಿ, ಬೆಂಗಳೂರಿನಲ್ಲಿ ದಿನಾಂಕ 26.08.1936 ರಂದು ಕಂಪನಿ ಸ್ಥಾಪಿಸಲಾಯಿತು. ಇದು ರಾಜ್ಯ ಸರ್ಕಾರದ ಸಾರ್ವಜನಿಕ ಉದ್ದಿಮೆಯಾಗಿದ್ದು ವಿವಿಧ ಹಾಗೂ ಬಗೆಯ ವಿದ್ಯುತ್ ದೀಪಗಳು ಮತ್ತು ವಿದ್ಯುತ್ ದೀಪಗಳ ಫಿಟ್ಟಿಂಗ್ಸ್‌ಗಳನ್ನು ಉತ್ಪಾದನೆ ಮಾಡುವ ಚಟುವಟಿಕೆಯನ್ನು ಹೊಂದಿತ್ತು ಎಂದರು.
ಈ ಕಂಪನಿಯ ಒಟ್ಟು ಷೇರು ಬಂಡವಾಳ ರೂ.11,81,02,330/- ಗಳಾಗಿದ್ದು ಇದರಲ್ಲಿ ರಾಜ್ಯ ಸರ್ಕಾರವು ಶೇ.91.07 ರಷ್ಟು ಷೇರು ಹೊಂದಿದೆ. ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾದ ಘೆಎಉಊ ಔಜಿಞಜಿಠಿಛಿ ಸಂಸ್ಥೆಯು ಶೇ.3.33 ರಷ್ಟು ಷೇರು, ಉಳಿದ ಶೇ.5.6 ರಷ್ಟು ಷೇರು ಬಂಡವಾಳವನ್ನು ಸಾರ್ವಜನಿಕರದ್ದಾಗಿದೆ ಎಂದರು.

ಈ ಕಂಪನಿಯನ್ನು ಸರ್ಕಾರವು ನೇರವಾಗಿ ತನ್ನ ವಶಕ್ಕೆ ತೆಗೆದುಕೊಳ್ಳದೆ, ಟ್ರಸ್ಟ್ ನೋಂದಾಯಿಸಿ ಖಾಸಗಿ ವ್ಯಕ್ತಿಗಳನ್ನು ಟ್ರಸ್ಟಿಗಳನ್ನಾಗಿ ನೇಮಿಸಿರುವುದು ನಿಜವೇ? ಇದರಿಂದ ಸರ್ಕಾರದ
ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಿದಂತಾಗುವುದಿಲ್ಲವೇ? ಎಂದು ಬೋಜೇಗೌಡರು ಪ್ರಶ್ನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net