

ಮೈಸೂರು: ಮೈಸೂರು ದಸರಾ ಅಂಗವಾಗಿ ನಡೆಯಲಿರುವ ಜಂಬೂ ಸವಾರಿಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಅಂತಿಮ ಹಂತದ ತೂಕ ಪರೀಕ್ಷೆಯನ್ನು ಇಂದು ನಡೆಸಲಾಯಿತು.
ಅಂಬಾರಿ ಹೊರುವ ಅಭಿಮನ್ಯು ಆನೆ ಕಾಡಿನಿಂದ ನಾಡಿಗೆ ಬಂದ ಮೇಲೆ 450 ಕೆ.ಜಿ ತೂಕ ಹೆಚ್ಚಿಸಿಕೊಂಡಿದೆ. ಈಗ ಅಭಿಮನ್ಯುವಿನ ಒಟ್ಟು ತೂಕ 5320 ಕೆ.ಜಿ.
ದಸರಾ ಪ್ರಯುಕ್ತ ಮೈಸೂರಿಗೆ ತಿಂಗಳುಗಳ ಮೊದಲೇ ಕಾಡಿನಿಂದ ಆನೆಗಳನ್ನು ತರಿಸಿಕೊಳ್ಳಲಾಗುತ್ತದೆ. ನಂತರ ಸಕಲ ಸಿದ್ಧತೆಯೊಂದಿಗೆ ತರಬೇತಿ ನೀಡಲಾಗುತ್ತದೆ. ಪ್ರತಿನಿತ್ಯ ಆನೆಗಳ ಆರೋಗ್ಯ ತಪಾಸಣೆಯೂ ನಡೆಯುತ್ತದೆ. ಆನೆಗಳು ಆರೋಗ್ಯವಾಗಿರಲು ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತದೆ.
ಇದೀಗ ಜಂಬೂ ಸವಾರಿಯ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಆನೆಗಳ ತೂಕ ಪರೀಕ್ಷೆ ಮಾಡಲಾಗಿದೆ. ಅದೇ ರೀತಿ ಮಹೇಂದ್ರ 4670 ಕೆ.ಜಿ, ಗೋಪಾಲ 5570 ಕೆ.ಜಿ, ಚೈತ್ರ 3340 ಕೆ.ಜಿ ಮತ್ತು ಅರ್ಜುನ 5860 ಕೆಜಿ ತೂಕ ಹೊಂದಿವೆ.