ಮ್ಯಾನ್ಮಾರ್ ಜೇಡ್ ಗಣಿಯಲ್ಲಿ ಭೂಕುಸಿತಕ್ಕೆ 123 ಜನ ಬಲಿ

Myanmar
Published on

ನಾಯ್ಪಿಟ್ವಾ: ಉತ್ತರ ಮ್ಯಾನ್ಮಾರ್​ನ ಜೇಡ್ ಗಣಿ ಪ್ರದೇಶದಲ್ಲಿ ಗುರುವಾರ ಸಂಭವಿಸಿದ ಭೂಕುಸಿತದಿಂದಾಗಿ ಕನಿಷ್ಠ 123 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಣಿಗಾರಿಕೆಯ ತ್ಯಾಜ್ಯದ ರಾಶಿ ಭಾರಿ ಮಳೆಯಿಂದಾಗಿ ನೆನೆದು ಕುಸಿದು ಬಿದ್ದ ಕಾರಣ ಕೆಳಭಾಗದಲ್ಲಿದ್ದ ಕಾರ್ವಿುಕರೆಲ್ಲರು ಸಮಾಧಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈವರೆಗೆ 123 ಶವಗಳನ್ನು ಮಣ್ಣಿನಿಂದ ಹೊರತೆಗೆಯಲಾಗಿದೆ. ಸುಮಾರು 100 ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಗಾಯಗೊಂಡ 30ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮ್ಯಾನ್ಮಾರ್​ನ ಹಪ್ಕಾಂತ್ ಗಣಿಗಳಲ್ಲಿ ಬಡ ಕಾರ್ವಿುಕರೇ ಹೆಚ್ಚು ಕೆಲಸ ಮಾಡುತ್ತಾರೆ. ಆದರೆ ಮುಂಜಾಗ್ರತಾ ಕ್ರಮಗಳ ನಿರ್ಲಕ್ಷ್ಯದಿಂದಾಗಿ ಹಲವು ಬಾರಿ ಈ ರೀತಿಯ ಅವಘಡಗಳು ಸಂಭವಿಸಿವೆ. ಈಗ ನಡೆದಿರುವ ಘಟನೆ ಕಳೆದ ಐದು ವರ್ಷಗಳಲ್ಲೇ ಅತಿ ಭೀಕರವಾದದ್ದು ಎನ್ನಲಾಗಿದೆ. ಕಳೆದ 2015 ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸುಮಾರು 100 ಜನರು ಸಾವನ್ನಪ್ಪಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net