VIDEO| ಶಾಲಾ ಅರ್ಜಿಯಲ್ಲಿ ಧರ್ಮದ ಬಗ್ಗೆ ಕೇಳಿದಾಗ ತನ್ನ ಮಗಳಿಗೆ ಶಾರುಖ್ ನೀಡಿದ ಉತ್ತರ ಹೇಗಿತ್ತು?

Shah Rukh
Published on

ಮುಂಬೈ: ಬಾಲಿವುಡ್​ ಬಾದ್​ಷಾ ಶಾರುಖ್ ಖಾನ್ ಅವರು ಗಣರಾಜ್ಯೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ನಡೆದ ಡ್ಯಾನ್ಸ್​ ರಿಯಾಲಿಟಿ ಶೋನಲ್ಲಿ ಜ್ಯಾತ್ಯಾತೀತೆಯ ಪಾಠವನ್ನು ಮಾಡಿ, ಎಲ್ಲರ ಮನಗೆದ್ದಿದ್ದಾರೆ.

ಬಾಲಿವುಡ್​ನ ಪ್ರಖ್ಯಾತ ಡ್ಯಾನ್ಸ್​ ಶೋ "ಡ್ಯಾನ್ಸ್​ ಪ್ಲಸ್​" ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ನಾವು ಯಾವ ಧರ್ಮಕ್ಕೆ ಸೇರಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಮ್ಮ ಮನೆಯಲ್ಲಿ ನಾವು ಹೇಗೆ ಭಾರತೀಯರು ಎಂಬುದು ಮುಖ್ಯವಾಗಿದೆ ಎಂದು ತಿಳಿಸಿದರು.

ನಾವೆಂದಿಗೂ ಮನೆಯಲ್ಲಿ ಹಿಂದು - ಮುಸ್ಲಿಂ ಬಗ್ಗೆ ಮಾತನಾಡುವುದಿಲ್ಲ. ನನ್ನ ಪತ್ನಿ ಹಿಂದು, ನಾನು ಮುಸ್ಲಿಂ ಮತ್ತು ನನ್ನ ಮಕ್ಕಳು ಹಿಂದೂಸ್ಥಾನ್​ ಎಂದು ಹೇಳಿದರು.

ಶಾಲೆಯಲ್ಲಿನ ಅರ್ಜಿಯಲ್ಲಿ ಧರ್ಮದ ಉಲ್ಲೇಖ ಮಾಡಲು ಮಗಳು ಸುಹಾನ ನಾವು ಯಾವ ಧರ್ಮಕ್ಕೆ ಸೇರಿದವರು ಎಂದು ಕೇಳಿದಳು. ಇದಕ್ಕೆ ಉತ್ತರಿಸಿ ನಾವೆಲ್ಲ ಭಾರತೀಯರು ನಮಗೆ ಯಾವುದೇ ಧರ್ಮವಿಲ್ಲ ಎಂದು ಹೇಳಿದ್ದಾಗಿ ಶಾರುಖ್​ ವಿವರಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net