'ನನ್ನ ಮಣ್ಣು, ನನ್ನ ದೇಶ' ಅಭಿಯಾನಕ್ಕೆ ಇಂದು ಚಾಲನೆ

BJP symbol
Published on

ಬೆಂಗಳೂರು: ಅಮೃತ ಕಾಲದಲ್ಲಿ ದೇಶದ ಹಿರಿಮೆ-ಗರಿಮೆ ಬಗ್ಗೆ ಹೆಮ್ಮೆ, ದೇಶಾಭಿಮಾನ ಬೆಳೆಸಲು ಉದ್ದೇಶಿತ ಬಿಜೆಪಿಯ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನ ಬುಧವಾರದಿಂದ ಪ್ರಾರಂಭವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅಭಿಲಾಷೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆಯಂತೆ ಅ.30ರವರೆಗೆ ವಿವಿಧ ಕಾರ್ಯಚಟುವಟಿಕೆಗಳನ್ನು ಪಕ್ಷದ ರಾಜ್ಯ ಸಮಿತಿ ಹಮ್ಮಿಕೊಂಡಿದೆ. ಅಭಿಯಾನದ ಮುಖೇನ ಕಾರ್ಯಕರ್ತರು ಪ್ರತಿ ಮನೆಗೆ ತಲುಪಲಿದ್ದಾರೆ. ಆ ಮನೆಯ ಕುಟುಂಬದ ಸದಸ್ಯರೊಂದಿಗೆ ಆತ್ಮೀಯ ಮಾತುಕತೆ ನಡೆಸಿ, ಮನೆಯಂಗಳದ ಮಣ್ಣು ಸಂಗ್ರಹಿಸುವರು.

ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮ ನಡೆಯಲಿದೆ. ಬೂತ್​ವುಟ್ಟದ ಕಾರ್ಯಕರ್ತರು ಸ್ವಯಂಸೇವಕರ ರೀತಿಯಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ದೇಶ ಸಾಧಿಸುತ್ತಿರುವ ಪ್ರಗತಿ, ಅಭಿವೃದ್ಧಿ ಫಲಿತಾಂಶ, ವಿಭಿನ್ನ ಆಲೋಚನೆ, ಹೊಸ ಯೋಜನೆಗಳು ಸರ್ವಾಂಗೀಣ ಪ್ರಗತಿಗೆ ಸಾಧ್ಯವಾಗಿಸಿದ್ದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ದೆಹಲಿಯ ಕರ್ತವ್ಯಪಥದಲ್ಲಿ ಹುತಾತ್ಮರ ಗೌರವಾರ್ಥ ನಿರ್ವಿುಸಲಿರುವ ‘ಅಮೃತ ಉದ್ಯಾನವನ’ಕ್ಕೆ ಮನೆಯಂಗಳದಿ ಸಂಗ್ರಹಿಸಿದ ಮಣ್ಣು ಬಳಕೆಯಾಗಲಿದೆ ಎಂದು ಗ್ರಾಮಸ್ಥರಿಗೆ ತಿಳಿಸಲಿದ್ದಾರೆ.

ಸಾಧಕರೊಂದಿಗೆ ಸಂವಾದ: ಗ್ರಾಮ, ಮಂಡಲಮಟ್ಟದಲ್ಲಿ ಮನೆ ಸಂಪರ್ಕದ ವೇಳೆ ಆಯಾ ಗ್ರಾಮದ ಸಾಹಿತಿಗಳು, ಸಾಧಕರು, ಗಣ್ಯ ವ್ಯಕ್ತಿಗಳೊಂದಿಗೆ ಕಾರ್ಯಕರ್ತರು ಸಂವಾದ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಮೃತ ಕಾಲದ ಪರಿಕಲ್ಪನೆ, 2047ಕ್ಕೆ ಅಭಿವೃದ್ಧಿ ಹೊಂದಿದ ಭಾರತವಾಗಬೇಕು, ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಬೇಕು ಎನ್ನುವ ಮಹತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಲವು ಹಂತದ ಸಮಿತಿಗಳು: ಅಭಿಯಾನ ಮತ್ತದರ ಭಾಗವಾಗಿರುವ ವಿವಿಧ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಹಲವು ಹಂತದ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯ ತಂಡವು ಮೇಲ್ವಿಚಾರಣೆ, ಪ್ರತಿದಿನದ ವರದಿ ತರಿಸಿಕೊಳ್ಳಲಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾರ್ಯದರ್ಶಿ ಜಗದೀಶ್ ಹಿರೇಮನಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಎಂಎಲ್​ಸಿ ಅರುಣ್ ಶಹಪುರ ರಾಜ್ಯ ತಂಡದಲ್ಲಿದ್ದಾರೆ.

ಅದೇ ರೀತಿ ಜಿಲ್ಲೆ, ಮಂಡಲ, ಶಕ್ತಿ ಕೇಂದ್ರಮಟ್ಟದಲ್ಲಿ ಸಂಯೋಜಕರು, ಗ್ರಾ.ಪಂ.ಮಟ್ಟದಲ್ಲಿ ತಂಡ, ಜಿಲ್ಲೆ ಹಾಗೂ ವಿಧಾನಸಭೆ ಕ್ಷೇತ್ರಕ್ಕೆ ತಲಾ ಮೂವರನ್ನು ಒಳಗೊಂಡ ವಿಶೇಷ ತಂಡಗಳು ರಚನೆಯಾಗಿವೆ.

ಅಮೃತ ಕಾಲದಲ್ಲಿ ದೇಶದೊಂದಿಗೆ ಕಾರ್ಯಕರ್ತರನ್ನು ಬೆಸೆಯುವ ಭಾವನಾತ್ಮಕ ಅಭಿಯಾನವಿದು. ದೇಶಾಭಿಮಾನ, ತಾಯ್ನೆಲದ ಬಗ್ಗೆ ಶ್ರೇಷ್ಠ ಭಾವನೆ, ಸೌಹಾರ್ದಯುತ ಒಡನಾಟ ಬೆಳೆಸುವುದು. ಜತೆಗೆ ಕಾರ್ಯಕರ್ತರಲ್ಲಿ ಚೈತನ್ಯ ತುಂಬುವುದು ಕಾರ್ಯಕ್ರಮಗಳ ಉದ್ದೇಶ. | ಅರುಣ್ ಶಹಾಪುರ

ಉದ್ಘಾಟನಾ ಕಾರ್ಯಕ್ರಮ: ಬಿಜೆಪಿ ರಾಜ್ಯ ಕಚೇರಿ ಸಮೀಪದ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10ಕ್ಕೆ ಪೂಜೆ ಸಲ್ಲಿಸುವ ಮೂಲಕ ‘ಮೇರಿ ಮಿಟ್ಟಿ ಮೇರಾ ದೇಶ್’ ಅಭಿಯಾನ ಉದ್ಘಾಟನೆಯಾಗಲಿದೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಸಿದ್ದರಾಜು, ಕಾರ್ಯದರ್ಶಿ ಜಗದೀಶ್ ಹಿರೇಮನಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಪುರ ಹಾಜರಿರಲಿದ್ದಾರೆ.

ಕಾರ್ಯಯೋಜನೆ

ಗ್ರಾಮಮಟ್ಟದಲ್ಲಿ ಸೆ.6 ರಿಂದ 15
  • ಪ್ರತಿ ಗ್ರಾಮದಿಂದ ಮಣ್ಣು ಸಂಗ್ರಹ್ಝ 
  • ಪ್ರತಿ ಹಳ್ಳಿಯಲ್ಲಿ 75 ಸಸಿಗಳನ್ನು ನೆಟ್ಟು ‘ಅಮೃತ’ ಉದ್ಯಾನವನ ನಿರ್ಮಾಣ
  • ಗ್ರಾಮದ ಶಾಲೆಯಲ್ಲಿ ಫಲಕ ಹಾಕುವುದು
  • ಐದು ಪ್ರತಿಜ್ಞೆಗಳ ಮೂಲಕ ಸಾಮೂಹಿಕ ಕಾರ್ಯಕ್ರಮ ಆಯೋಜನೆ

ಮಂಡಲಮಟ್ಟದಲ್ಲಿ ಅ.3 ರಿಂದ 13

  • ವಿವಿಧ ಗ್ರಾಮಗಳಿಂದ ಸಂಗ್ರಹಿಸಿದ ಮಣ್ಣಿನಿಂದ ಅಮೃತ ಕಲಶ ತಯಾರಿಸುವುದು
  • ಎನ್​ಸಿಸಿ, ಎನ್​ಎಸ್​ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಯುವಜನರ, ಮಹಿಳೆಯರ ಜತೆಗೂ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮ
  • ಅಮೃತ ಕಲಶದೊಂದಿಗೆ ಹೋಗಲು ಸ್ವಯಂಸೇವಕರ ತಂಡ ರಚನೆ

ರಾಜ್ಯಮಟ್ಟದಲ್ಲಿ ಅ.25 ರಿಂದ 28

  • ಮಂಡಲಗಳಿಂದ ಅಮೃತ ಕಲಶ ಸಂಗ್ರಹ
  • ರಾಜ್ಯಪಾಲರು, ಸಿಎಂ, ಮಾಜಿ ಸಿಎಂ, ಪ್ರತಿಪಕ್ಷ ನಾಯಕರು, ಸಂಸದರ ಸಮ ಕ್ಷಮ ಸಾರ್ವಜನಿಕ ಸ್ಥಳದಲ್ಲಿ ಕಾರ್ಯಕ್ರಮ 
  • ಪ್ರತಿ ಮಂಡಲದ ಮೂವರು ಪ್ರಮುಖ ಕಾರ್ಯಕರ್ತರು ಅಮೃತ ಕಲಶವನ್ನು ರೈಲಿನಲ್ಲಿ ದೆಹಲಿಗೆ ಕೊಂಡೊಯ್ಯುವುದು

ರಾಷ್ಟ್ರೀಯಮಟ್ಟದಲ್ಲಿ ಅ.29 ರಿಂದ 30

  • ರಾಜ್ಯದಿಂದ ಅಮೃತ ಕಲಶದೊಂದಿಗೆ ಹೋಗುವ ಪ್ರಮುಖ ಕಾರ್ಯಕರ್ತರಿಗೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ರಾಜ್ಯದ ಕಾರ್ಯಕರ್ತರಿಂದಲೇ ಸ್ವಾಗತ
  • ದೆಹಲಿಯ ಕರ್ತವ್ಯಪಥದಲ್ಲಿ ಹುತಾತ್ಮರ ಗೌರವಾರ್ಥ ನಿರ್ವಿುಸಲಿರುವ ‘ಅಮೃತ ಉದ್ಯಾನವನ’ ಸ್ಥಳಕ್ಕೆ ರಾಜ್ಯದಿಂದ ಕೊಂಡೊಯ್ದ ಕಲಶಗಳ ಸಮರ್ಪಣೆ.
  • ಕಾರ್ಯಕರ್ತರನ್ನು ಉದ್ದೇಶಿಸಿ ನರೇಂದ್ರ ಮೋದಿ ಭಾಷಣ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net