

‘My people cheated me’ Singer Sunitha’s words crying
ಹೈದರಾಬಾದ್: ತಮ್ಮ ಮಧುರ ಕಂಠದಿಂದ ಗಾಯಕಿಯಾಗಿ ಮಾತ್ರವಲ್ಲ, ಡಬ್ಬಿಂಗ್ ಕಲಾವಿದೆಯಾಗಿಯೂ ಟಾಲಿವುಡ್ ಮತ್ತು ಉಭಯ ತೆಲುಗು ರಾಜ್ಯಗಳಲ್ಲಿ ಮಿಂಚುತ್ತಿರುವ ಸುನಿತಾ ಸದಾ ನೇರ ನುಡಿಯಿಂದ ಹೆಸರುವಾಸಿಯಾಗಿದ್ದಾರೆ. ಅವರ ಇತ್ತೀಚೆಗೆ ವೀಡಿಯೋವೊಂದರಲ್ಲಿ ‘ನನ್ನ ಜನ ನನಗೆ ಮೋಸ ಮಾಡಿದ್ದಾರೆ’ ಎಂದು ಭಾವುಕರಾಗಿ ಹೇಳಿರುವ ಮಾತುಗಳು ಅಭಿಮಾನಿಗಳನ್ನು ದುಃಖದಲ್ಲಿ ಮುಳುಗಿಸುವಂತೆ ಮಾಡಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಸುನಿತಾ, ಸಂದರ್ಶನ ಮಾತ್ರವಲ್ಲ, ಯಾವುದೇ ಸಂದರ್ಭದಲ್ಲೂ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುತ್ತಾರೆ. ಈಗಲೂ ಅವರು ಅದೇ ರೀತಿ ಮಾಡಿದ್ದಾರೆ. ಸುನಿತಾ ಅವರು ತಮ್ಮ ಜೀವನದಲ್ಲಿ ದುಡಿದ ಶ್ರಮವನ್ನು ತಿಳಿಸುವುದಷ್ಟೇ ಅಲ್ಲ, ತಾವು ಮೋಸ ಹೋದ ಬಗ್ಗೆಯೂ ತಮ್ಮ ಅಭಿಮಾನಿಗಳು, ಅನುಯಾಯಿಗಳನ್ನು ಒಂದು ಕ್ಷಣ ಭಾವುಕರಾಗುವಂತೆ ಮಾಡಿದ್ದಾರೆ.
ರಾಮ್ ವೀರಪನೇನಿ ಅವರನ್ನು 2011ರಲ್ಲಿ ಎರಡನೇ ಮದುವೆಯಾಗಿದ್ದ ಸುನಿತಾ, ಜೀವನವನ್ನು ಸಂತೋಷದಿಂದ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತಮ್ಮ ಹಿಂದಿನ ಕಷ್ಟಗಳನ್ನು ಹಂಚಿಕೊಂಡಿದ್ದಾರೆ.
17ನೇ ವಯಸ್ಸಿಗೆ ತನ್ನ ತಂದೆಯ ವ್ಯವಹಾರ ನಷ್ಟದಲ್ಲಿತ್ತು. ಇದೇ ಸಂದರ್ಭ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾಗಿ ಸುನಿತಾ ಹೇಳಿದರು. ನಂತರ ಕೆಲವು ಕಾರಣಗಳಿಂದಾಗಿ 19ನೇ ವಯಸ್ಸಿನಲ್ಲಿ ಮದುವೆಯಾಗಿದ್ದು, ಸಂಸಾರದ ಬಾರ ಹೆಗಲ ಮೇಲೆ ಬಿದ್ದಿತು. ಆಗ ತನ್ನ ಹತ್ತಿರದವರು ಮತ್ತು ಆತ್ಮೀಯರು ಸಹಾಯಕ್ಕಿಂತ ಟೀಕಿಸುವುದು, ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದನ್ನು ಮಾಡಿದರು. ಸುತ್ತಮುತ್ತಲಿನವರು ಮತ್ತು ನನ್ನ ಜನರೇ ನನಗೆ ಮೋಸ ಮಾಡಿದರು ಎಂದು ಕೊಂಚ ಭಾವುಕರಾಗಿದ್ದಾರೆ.
ಸುನಿತಾ, ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಎದುರಾದಾಗ ಮುಗುಳ್ನಕ್ಕು ಸುಮ್ಮನಾಗುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಕೆಲವರು ಅದರಲ್ಲೂ ತಪ್ಪು ಕಂಡುಹಿಡಿಯುತ್ತಾರೆ, ತಮ್ಮ ನೋವು ಕೆಲವರಿಗೆ ಅರ್ಥವಾಗಗುತ್ತದೆ ಎಂದು ನೆನಪಿಸಿಕೊಂಡರು.
ಇನ್ನು ಕೆಲವರು ಇದು ಫೇಕ್ ಜೋಕ್ ಎಂದು ಕಮೆಂಟ್ ಮಾಡಿದ್ದು.. ಅವರು ಮಾತುಗಳಿಂದ ಅಭಿಮಾನಿಗಳು, ಫಾಲೋವರ್ಸ್ ಮಾತ್ರವಲ್ಲ.. ಎಲ್ಲರನ್ನೂ ಭಾವುಕರನ್ನಾಗಿಸುತ್ತಿದ್ದಾರೆ ಈ ಸ್ಟಾರ್ ಸಿಂಗರ್.