

LinkedIn: ಆಟೋಮೋಬೈಲ್ ಕ್ಷೇತ್ರದಲ್ಲಿ ಉನ್ನತ ಹುದ್ದೆ ಅಂಲಕರಿಸಿದ್ದರೂ ಕೆಲಸ ಮಾತ್ರ ಹೆಂಡತಿ ಸಹಾಯಕ ಎಂದು ತಮ್ಮ ಲಿಂಕ್ಡ್ ಇನ್ ಪ್ರೊಫೈಲ್‌ನಲ್ಲಿ ಬರೆದುಕೊಂಡಿರುವ ನೋಯ್ಡಾ ವ್ಯಕ್ತಿಯ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೌದು, ನೋಯ್ಡಾ ನಿವಾಸಿ ಅನಿಲ್ ಬವೇಜಾ ಎಂಬುವವರು ಅವರ ಪ್ರೊಫೈಲ್‌ನಲ್ಲಿ ಅಸಾಮಾನ್ಯ ಉದ್ಯೋಗ ವಿವರಣೆ ನೀಡಿದ ಹಿನ್ನೆಲೆ ಕೆಲಸದ ವಿಶಿಷ್ಟತೆಯಿಂದಾಗಿ ಅದು ಸಾಮಾಜಿಕ ಮಾಧ್ಯಮದಲ್ಲಿ ಬೇಗನೆ ವೈರಲ್ ಆಗಿದೆ.
ಅನಿಲ್ ಬವೇಜಾ ಹೋಂಡಾ ಕಾರ್ಸ್ ಇಂಡಿಯಾ ಸೇರಿದಂತೆ ಪ್ರಮುಖ ಆಟೋಮೊಬೈಲ್ ಕಂಪನಿಗಳಲ್ಲಿ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ 'ಸಲಹೆಗಾರ' ನಂತಹ ಪ್ರಮಾಣಿತ ಶೀರ್ಷಿಕೆಯನ್ನು ಆಯ್ಕೆ ಮಾಡುವ ಬದಲು, ಅವರು ಆಸಕ್ತಿದಾಯಕ ವಿವರಣೆಯನ್ನು ಆರಿಸಿಕೊಂಡರು. ಇದು ಬಹಳಷ್ಟು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಕರ್ಷಿಸಿದೆ.
ಅನಿಲ್ ಬವೇಜಾ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಹೋಂಡಾ ಕಾರ್ಸ್ ಇಂಡಿಯಾದಲ್ಲಿ 16 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದರು. ಅಲ್ಲಿ ಅವರು ಮಾರ್ಕೆಟಿಂಗ್ ಮತ್ತು ಸ್ಟ್ರಾಟಜಿ ಆಪರೇಟಿಂಗ್ ಹೆಡ್ ಆಗಿದ್ದರು. ನಂತರ, ಅವರು ಕಾರು ಕಂಪನಿಯ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು ಎಂದು ಬರೆಯುವುದರ ಜತೆಗೆ ಅವರು ಆಗಸ್ಟ್ 2023 ರಿಂದ ತಮ್ಮ ಪತ್ನಿಯ ಸಹಾಯಕನ(Assistent To My Wife) ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಬರೆಯುವ ಮೂಲಕ ತಮಾಷೆಯಾಗಿ ಎಲ್ಲರನ್ನು ನಗಿಸುತ್ತದೆ.
ಇದೀಗ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ತರೇಹವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.(ಏಜೆನ್ಸೀಸ್)
Assistant to my wife.. byu/WarpFactorNin9 inLinkedInLunatics