ಡೆಲಿವರಿ ಬಾಯ್​ಗೆ ಕಪಾಳಮೋಕ್ಷ; 30 ಸಾವಿರ ರೂ.ಗೆ ಡಿಮ್ಯಾಂಡ್​ ಇಟ್ಟ ಮಹಿಳೆ! ಏನಿದು ವಿವಾದ?

Untitled design - 2025-09-15T104305.870
Published on

ಮಹಿಳೆಯೊಬ್ಬಳು ಪಿಜ್ಜಾ ಡೆಲಿವರಿ ಬಾಯ್​ ಅನ್ನು ರಸ್ತೆಯಲ್ಲೇ ಕಪಾಳಮೋಕ್ಷ 30 ಸಾವಿರ ರೂ. ಕೊಡುವಂತೆ ಒತ್ತಾಯಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅಲ್ಲದೆ, ಲಕ್ನೋದ ಜನನಿಬಿಡ ಬೀದಿಯಲ್ಲಿ ನಡೆದ ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ.

ಏನಿದು ವಿವಾದ?

ಲಕ್ನೋದ ಜನದಟ್ಟಣೆಯ ರಸ್ತೆಗಳಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಡೆಲಿವರಿ ರೈಡರ್ ಆಕಸ್ಮಿಕವಾಗಿ ಮಹಿಳೆಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಹಿನ್ನೆಲೆ ಮಹಿಳೆ ಕೋಪಗೊಂಡ ಮಹಿಳೆ ಡೆಲಿವರಿ ಹುಡುಗನಿಗೆ ಕಪಾಳಮೋಕ್ಷ ಮಾಡಿ ಅವನ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿರುವ ದೃಶ್ಯಗಳ್ಳುಳ್ಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

30 ಸಾವಿರ ರೂ.ಗೆ ಪರಿಹಾರ!

ಮುಂದುವರೆದು ವಿಡಿಯೋದಲ್ಲಿ ತೋರಿಸಿರುವಂತೆ.. ನೀವು ರಸ್ತೆಯಲ್ಲಿ ಏನು ಮಾಡುತ್ತಿದ್ದೀರಾ, ನಿಮಗೆ ಚಾಲನೆ ಮಾಡಲು ತಿಳಿದಿಲ್ಲದಿದ್ದರೆ, ನೀವು ಏಕೆ ಚಾಲನೆ ಮಾಡುತ್ತೀರಿ? ಮೊದಲು, ಕರೆ ಮಾಡಿ 30 ಸಾವಿರ ಕೂಡಲೇ ಹಣ ಕೇಳಿ ಎಂದಿದ್ದಾಳೆ. ತಕ್ಷಣಕ್ಕೆ ಪರಿಹಾರ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ದಿಗ್ಭ್ರಮೆಗೊಂಡಂತೆ ಡೆಲಿವರಿ ರೈಡರ್​ ಅಫಘಾತದ ಬಗ್ಗೆ ವಿವವರಿಸಲು ಹೆಣಗಾಡಿದ್ದಾನೆ. ಆದರೆ, ಮಹಿಳೆಯ ವಾಗ್ವಾದ ಮಾತ್ರ ನಿಲ್ಲಲ್ಲೇ ಇಲ್ಲ. ಪಕ್ಕದಲ್ಲಿದ್ದವರು ಮಧ್ಯಪ್ರವೇಶಿಸಿದಾಗ ಒಬ್ಬರು ವೀಡಿಯೊವನ್ನು ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ.

ಮಹಿಳೆಯ ವಿರುದ್ಧ ನೆಟ್ಟಿಗರ ಆಕ್ರೋಶ

ಈ ವೀಡಿಯೊ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ಅಲ್ಲದೆ, ತೀವ್ರ ಚರ್ಚೆಗಳನ್ನು ಹುಟ್ಟುಹಾಕಿದೆ. ಬಳಕೆದಾರರು ಮಹಿಳೆಯ ಕೃತ್ಯಗಳನ್ನು ಹಲ್ಲೆ ಎಂದು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಹಲ್ಲೆ ಮಾಡಿದ್ದಾಕ್ಕಾಗಿ ಆಕೆಯನ್ನು ಕೂಡಲೇ ಬಂಧಿಸಿ. ಆಕೆಗೆ ಹೀಗೆ ಮಾಡಲು ಅವಕಾಶ ನೀಡುವ ಸವಲತ್ತು ಅದ್ಭುತವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು ಅಸಾಮಾನ್ಯವೇನಲ್ಲ.. ಆದರೆ, ಇದು ನನ್ನನ್ನು ವಿಸ್ಮಯಗೊಳಿಸುತ್ತದೆ" ಎಂದು ಬರೆದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net