ಅಮ್ಮನೆಂಬ ಪ್ರೀತಿಯ ಕಡಲು: ನನ್ನಮ್ಮ ನನಗೆ ಮಾದರಿ!

Navya
Published on

ಅಮ್ಮನಿಲ್ಲದೆ ಬದುಕಿಲ್ಲ, ಅವಳೊಂದು ದೊಡ್ಡ ಭಾವಶಕ್ತಿ. ಅವಳ ಅಂತಃಕರಣದ ಲೋಕದಲ್ಲಿ ಬೆಳೆದ ಮಕ್ಕಳು ಎಷ್ಟೇ ದೊಡ್ಡವರಾದರೂ, ಆ ಪ್ರೀತಿ, ಮಮತೆ, ವಾತ್ಸಲ್ಯ ಮತ್ತು ಪ್ರೇರಣೆಯನ್ನು ಮರೆಯಲು ಸಾಧ್ಯವಿಲ್ಲ. ಹಾಗಾಗಿ, ಜೀವನದಲ್ಲಿ "ತಾಯಿಯೇ ದೇವರು' ಎಂದೆನಿಸಿದ ಸಂದರ್ಭಗಳನ್ನು ಹಂಚಿಕೊಳ್ಳುವಂತೆ ನೀಡಿದ ಕರೆಗೆ ಓದುಗರಿಂದ ಬಂದಿರುವ ಪ್ರತಿಕ್ರಿಯೆ ಅಭೂತಪೂರ್ವ. ಅಮ್ಮನ ದಿನದ ನಿಮಿತ್ತ ಅಂಥ ಕೆಲ ಘಟನೆಗಳನ್ನು ಇಲ್ಲಿ ದಾಖಲಿಸಲಾಗಿದೆ.

ನನ್ನಮ್ಮ ನನಗೆ ಮಾದರಿ! ನನ್ನ ತವರುಮನೆ ಅಂಕೋಲಾ ತಾಲೂಕಿನ ತಳಗದ್ದೆ. ತಾಲೂಕು ಕೇಂದ್ರದಿಂದ ಕೇವಲ ಏಳು ಕಿಮೀ ದೂರದಲ್ಲಿದ್ದರೂ ನಾಲ್ಕು ಚಕ್ರದ ವಾಹನ ಇಂದಿಗೂ ಹೋಗದ ಬೆಟ್ಟದಂಚಿನಲ್ಲಿರುವ ನಾಗರಿಕ ಸೌಲಭ್ಯ ವಂಚಿತ ಊರು. ಅಂತಹ ಊರಿನಲ್ಲಿ ನಾನು ಮತ್ತು ನನ್ನಕ್ಕ ಪ್ರಾಥಮಿಕ ಶಾಲೆಗೆ ಹೋಗುವ ವೇಳೆಗೆ ನಮ್ಮ ಮನೆಯ ಬೆನ್ನೆಲುಬಾದ ನಮ್ಮಪ್ಪ ಬಾರದ ಊರು ಸೇರಿದಾಗ ನನ್ನಜ್ಜಿಯ ನೆರವಿನೊಂದಿಗೆ ಅಮ್ಮ ಪಾರ್ವತಿ ಬೊಮ್ಮಯ್ಯ ನಾಯಕ ಮನೆಯನ್ನು ನಿಭಾಯಿಸಿದ ರೀತಿ ಪ್ರೇರಣಾದಾಯಿ. ನಮ್ಮಿಬ್ಬರನ್ನು ಓದಿಸಿ, ನಾನು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ನನ್ನದಾಗಿಸಿಕೊಳ್ಳುವಲ್ಲಿ ಅಮ್ಮನ ಹಾಗೂ ಅಜ್ಜಿಯ ಪಾತ್ರ ಬಹು ದೊಡ್ಡದು. ನಾನು ನನ್ನಮ್ಮನಿಂದ ಕಲಿತ ದೊಡ್ಡ ಗುಣ, ಋಜ್ಞಿಜಿಞ್ಠಞ ್ಟಛಿಟ್ಠಿಜ್ಟಿಛಿಞಛ್ಞಿಠಿಠ ಚ್ಞಛ ಞಚ್ಡಜಿಞ್ಠಞ ಚಛ್ಜ್ಠಠಠಿಞಛ್ಞಿಠಿಠ ಚ್ಟಛಿ ಠಿಜಛಿ ಠಿಡಿಟ ಠಠಿಛಿಟಠ ಟ್ಛ ಠ್ಠ್ಚ್ಚಛಿಠಠ್ಛ್ಠ್ಝ್ಝ ್ಝಜ್ಛಿಛಿ ಎಂಬುದನ್ನು. ತಾಳ್ಮೆ ಎನ್ನುವ ಅಸ್ತ್ರ ನನಗೆ ಅಮ್ಮನಿಂದ ಬಂದ ಬಳುವಳಿ. ನನ್ನ, ಅಕ್ಕನ ಮದುವೆ ಆದ ನಂತರ ಆ ಬೆಟ್ಟದ ಇಳಿಜಾರಿನ ಒಂಟಿಮನೆಯಲ್ಲಿ ಏಕಾಂಗಿಯಾಗಿ ವಾಸಮಾಡುವುದು ಒಂದು ಸವಾಲು. ನಮ್ಮಮ್ಮನ ಆ ಧೈರ್ಯ&ಸ್ಥೆ$ರ್ಯ ನಮ್ಮದಾಗಿಸಿ ಕೊಳ್ಳುತ್ತಿದ್ದೇನೆ.

| ನವ್ಯ ಶಿವದೇವ ಮೊಗಟಾ ಯಲ್ಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net