ಡಿವೋರ್ಸ್ ಕೊಟ್ಟ ಪತಿ; ಮೀಸೆ, ಗಡ್ಡ ಬಿಟ್ಟು ಪುರುಷನಾದ ಮಹಿಳೆ!

beard woman
Published on

ಪಂಜಾಬ್: ದೇಹದ ಮೇಲೆ ಕೂದಲು ಬೆಳೆಯುವುದು ಸಹಜವಾಗಿದೆ.  ಇಲ್ಲೊಬ್ಬಾತ ಹೆಂಡ್ತಿಯ ಮುಖದ ಮೇಲೆ ಕೂದಲು ನೋಡಿ ಆಕೆಗೆ ಡಿವೋರ್ಸ್ ಕೊಟ್ಟುಬಿಟ್ಟಿದ್ದಾನೆ. ನಂತರ ಪಂಜಾಬ್​ ಮಹಿಳೆ ಗಡ್ಡ, ಕೂದಲು ಬಿಟ್ಟುಕೊಂಡು ಪುರುಷನಾಗಿ ಬದಲಾಗಿದ್ದಾರೆ.

ಮನ್‌ದೀಪ್‌ ಎಂಬ ಮಹಿಳೆ ಕೂದಲು ಬಿಟ್ಟುಕೊಂಡು ಪುರುಷನಾಗಿ ಬದಲಾಗಿದ್ದಾರೆ. ಅವರು ಮುಖದ ಮೇಲಿನ ಕೂದಲನ್ನು ಹಾಗೆಯೇ ಬಿಟ್ಟುಕೊಳ್ಳುವ ನಿರ್ಧಾರ ಮಾಡಿದ ಬಳಿಕ ಹತ್ತಕ್ಕೂ ಹೆಚ್ಚು ವರ್ಷ ಜತೆಯಾಗಿದ್ದ ಪತಿ ದೂರವಾಗಿದ್ದಾನೆ.

ಮದುವೆಗೂ ಮುನ್ನ ಮುಖದಲ್ಲಿ ಕೂದಲಿರಲಿಲ್ಲ. ನಂತರ ನನ್ನ ಮುಖದ ಮೇಲೆ ಕೂದಲು ಹೇಗೆ ಬಂದಿತು ಮತ್ತು ಜೀವನವು ಹೇಗೆ ಸಂಪೂರ್ಣವಾಗಿ ಬದಲಾಯಿತು ಎಂಬುದನ್ನು ಮನ್‌ದೀಪ್ ವಿವರಿಸಿದ್ದಾರೆ. ಮುಖದ ಮೇಲಿನ ಕೂದಲು ನೋಡಿದ ಪತಿ ವಿಚ್ಛೇದನಕ್ಕೆ ಒತ್ತಾಯಿಸಲು ಪ್ರಾರಂಭಿಸಿದರು. ನಾನು ಖಿನ್ನತೆಗೆ ಒಳಗಾಗುವ ರೀತಿಯಲ್ಲಿ ಗಂಡನ ವರ್ತನೆ ಬದಲಾಯಿತು. ಮಾನಸಿಕ ಆರೋಗ್ಯಕ್ಕಾಗಿ ಗುರುದ್ವಾರಕ್ಕೆ ಹೋಗಲು ಪ್ರಾರಂಭಿಸಿದೆ. ನಂತರ ಕೂದಲನ್ನು ಕ್ಷೌರ ಮಾಡಲು ನಿರಾಕರಿಸಿದರು.

ಕೂದಲನ್ನ, ಗಡ್ಡವನ್ನು ಹಾಗೆಯೇ ಬಿಟ್ಟಿದ್ದಾರೆ. ಹೊಸ ಮೋಟಾರ್ ಬೈಕ್‌ನ್ನು ಓಡಿಸುತ್ತಾರೆ. ಜನರು ಸಹ ಅವರನ್ನು ಪುರುಷ ಎಂದು ಅಂದುಕೊಳ್ಳಲು ಆರಂಭಿಸಿದ್ದಾರೆ. ಮನ್ ದೀಪ್‌ ಪಂಜಾಬ್‌ನಲ್ಲಿ ತನ್ನ ಸಹೋದರರೊಂದಿಗೆ ಕೆಲಸ ಮಾಡುತ್ತಾ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಹೀಗೆ ಮುಖದ ಕೂದಲನ್ನು ಒಪ್ಪಿಕೊಂಡಿರುವುದು ಮನ್‌ದೀಪ್ ಮಾತ್ರವಲ್ಲ, ಈ ಹಿಂದೆ ಹರ್ನಮ್‌ ಕೌರ್ ಎಂಬವರು ತಮ್ಮ 11 ನೇ ವಯಸ್ಸಿನಲ್ಲಿ ಬೆಳೆಯಲು ಪ್ರಾರಂಭಿಸಿದ ಮುಖದ ಕೂದಲನ್ನು ಹಾಗೆ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net