

ನ್ಯೂಯಾರ್ಕ್: ಪತಿ ಹಾಗೂ ಆತನ ಸ್ನೇಹಿತರು ತನಗೆ ನಿಕ್ನೇಮ್ (ಅಡ್ಡ ಹೆಸರು) ಇಟ್ಟಿರುವುದನ್ನು ಪತ್ತೆಹಚ್ಚಿರುವ ಮಹಿಳೆಯೊಬ್ಬಳು ಆ ಬಗ್ಗೆ ಪತಿಯನ್ನು ಪ್ರಶ್ನಿಸಿದಾಗ ವಿವರಣೆ ನೀಡಲು ನಿಕಾರಿಸಿರುವುದು ಇದೀಗ ಮಹಿಳೆಯನ್ನು ಚಿಂತೆಗೀಡುಮಾಡಿದೆ. ಹೀಗಾಗಿ ಆಕೆ ಸಾಮಾಜಿಕ ಜಾಲತಾಣ ಮೊರೆ ಹೋಗಿದ್ದಾಳೆ.
ರೆಡಿಟ್ ಜಾಲತಾಣದಲ್ಲಿ ಅಳಲು ತೋಡಿಕೊಂಡಿರುವ ಮಹಿಳೆ ನಿಕ್ನೇಮ್ ಬಗ್ಗೆ ಗೊತ್ತಾಗಿದ್ಹೇಗೆ ಎಂಬುದನ್ನು ವಿವರಿಸಿದ್ದಾಳೆ. ತಾಯಿಯೊಂದಿಗೆ ಮೆಸೇಜ್ ಮಾಡುವಾಗ ಚಾರ್ಜ್ ಖಾಲಿಯಾಗಿ ನನ್ನ ಮೊಬೈಲ್ ಡೆಡ್ ಆಯಿತು. ತಾಯಿಗೆ ಮುಖ್ಯವಾದ ಮಾತೊಂದನ್ನು ಹೇಳಬೇಕಿತ್ತು. ಹೀಗಾಗಿ ಪತಿಯ ಬಳಿ ಮೊಬೈಲ್ ಪಡೆದುಕೊಂಡೆ. ಬಳಿಕ ಉಪಯೋಗಿಸುವಾಗ ಒಂದು ಮಸೇಜ್ ನೋಟಿಫಿಕೇಶನ್ ಬಂದಿತು. ಪತಿಯ ಸ್ನೇಹಿತರ ಗ್ರೂಪ್ ಮಸೇಜ್ ಆಗಿತ್ತು. ನೀನು ಮತ್ತು ಎಸ್ಟಿ (ST) ಇನ್ನು ಕೂಡ ಹ್ಯಾಲೋವೀನ್ ಯೋಜನೆಗಳನ್ನು ಮಾಡಬೇಕೆಂದುಕೊಂಡಿದ್ದೀರಾ? ಎಂದು ಒಂದು ಮೆಸೇಜ್ನಲ್ಲಿ ಪ್ರಶ್ನಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ಎಸ್ಟಿ ಅಂದರೆ ಬೇರೆ ಯಾರೋ ಇರಬಹುದು ಅಂದುಕೊಂಡಿದ್ದ ಮಹಿಳೆಗೆ ಸ್ನೇಹಿತರ ಮತ್ತಷ್ಟು ಮಸೇಜ್ಗಳನ್ನು ಪತಿಯ ಮೊಬೈಲ್ನಲ್ಲಿ ಕೆದಕಿದಾಗ ಆಕೆಯನ್ನೇ ಉದ್ದೇಶಿಸಿ ಎಸ್ಟಿ ಎಂದು ಹೇಳಿರುವುದು ಖಚಿತವಾಗುತ್ತದೆ. ಆದಾಗ್ಯು ಎಸ್ಟಿ ಅಂದರೆ ಆಕೆಯ ಹೆಸರಿನ ಸಂಕ್ಷಿಪ್ತ ಪದವಂತೂ ಅಲ್ಲ. ಅಲ್ಲದೆ, ಆಕೆಯ ಕುಟುಂಬ, ಸ್ನೇಹಿತರು ಸಹ ಆ ರೀತಿ ಕರೆಯುವುದಿಲ್ಲ. ಇದರಿಂದ ತುಂಬಾ ಗೊಂದಲಕ್ಕೆ ಒಳಗಾಗುತ್ತಾಳೆ.
ಏನೆಂದು ತಿಳಿದುಕೊಳ್ಳಲೇಬೇಕೆಂಬ ಉದ್ದೇಶದಿಂದ ಪತಿಯ ಬಳಿ ಕೇಳಲು ಹೋದಾಗ, ಏನು ಹೇಳದೆ ಆತ ಮೊಬೈಲ್ ಕಸಿದುಕೊಂಡು ಏನು ಇಲ್ಲ. ಅದೊಂದು ನಿಕ್ನೇಮ್ ಅಷ್ಟೇ ಎನ್ನುತ್ತಾನೆ. ಇದು ಆಕೆಯನ್ನು ಮತ್ತಷ್ಟು ಗೊಂದಲಕ್ಕೆ ದೂಡುತ್ತದೆ. ಏನೇ ಮಾಡಿದರೂ ಆತ ಬಾಯ್ಬಿಡುವುದೇ ಇಲ್ಲ. ಬದಲಾಗಿ ಏನೇನೋ ಸಮಜಾಯಿಷಿ ನೀಡುತ್ತಾನೆ. ಆದರೆ, ಆತ ಹೇಳುವುದೆಲ್ಲ ಸುಳ್ಳು ಎಂಬುದು ಆಕೆಗೆ ತಿಳಿದಿರುತ್ತದೆ.
ಇದೇ ಗೊಂದಲದಲ್ಲಿರುವ ಮಹಿಳೆ ಇದೀಗ ರೆಡಿಟ್ ಜಾಲತಾಣ ಮೊರೆಹೋಗಿದ್ದು, ಎಸ್ಟಿ ಅಂದರೆ ಏನು? ನಿಮಗೇನಾದರೂ ತಿಳಿದಿದೆಯೇ? ಗೊತ್ತಿದ್ದರೆ ಹೇಳಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಅನೇಕರು ಪ್ರತಿಕ್ರಿಯೆ ನೀಡಿದ್ದು, ಅದೊಂದು ಕೆಟ್ಟ ಪದ ಇರಬಹುದು ಎಂದು ಅಂದಾಜಿಸಿದ್ದಾರೆ. ಇನ್ನು ಕೆಲವರು ನಮಗೂ ಸಹ ಏನೂ ತಿಳಿಯುತ್ತಿಲ್ಲ ಎಂದಿದ್ದಾರೆ. ಹೀಗೆ ಚರ್ಚೆ ನಡೆಯುತ್ತಿದೆ. ಆದರೆ, ಎಸ್ಟಿ ಅಂದರೆ ಏನು ಎಂಬುದು ಮಾತ್ರ ಈ ಕ್ಷಣದವರೆಗೂ ತಿಳಿದುಬಂದಿಲ್ಲ. ಹಾಗೇನಾದರೂ ನಿಮಗೆ ಗೊತ್ತಿದ್ದರೆ ತಿಳಿಸುವ ಪ್ರಯತ್ನವನ್ನು ಮಾಡಬಹುದು. (ಏಜೆನ್ಸೀಸ್)