Madhu on Rashmika : ನನ್ನ ಆಕ್ಸೆಂಟ್ ಹೀಗೇ ಇರುತ್ತೆ, ಅದಕ್ಕೇನು?: ರಶ್ಮಿಕಾ ಮಂದಣ್ಣ ಧೈರ್ಯಕ್ಕೆ ಹಿರಿಯ ನಟಿ ಮಧೂ ಫಿದಾ!

ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಆಕ್ಸೆಂಟ್‌ನಿಂದಾಗಿ ಎದುರಿಸಿದ ಟೀಕೆಗಳನ್ನು ನೆನೆದು ನಟಿ ಮಧೂ, 'ಕಾಫಿ ವಿತ್ ಕರಣ್' ಶೋನಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಶೈಲಿಯನ್ನು ಹೆಮ್ಮೆಯಿಂದ ಒಪ್ಪಿಕೊಂಡಿದ್ದಕ್ಕೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
Madhu's appreciation for Rashmika
ಬಾಲಿವುಡ್ ಟೀಕೆಗಳಿಗೆ ರಶ್ಮಿಕಾ ಕೊಟ್ಟ ದಿಟ್ಟ ಉತ್ತರ ಮೆಚ್ಚಿಕೊಂಡ ನಟಿ ಮಧೂ
Published on: 

South Indian Accent: ಸಾಮಾಜಿಕ ಜಾಲತಾಣ ಹಾಗೂ ಟಿವಿ ಶೋಗಳಲ್ಲಿ ತಮ್ಮ ದಕ್ಷಿಣ ಭಾರತದ ಆಕ್ಸೆಂಟ್ ಬಗ್ಗೆ ಬರುವ ಟೀಕೆಗಳನ್ನು ನಟಿ ರಶ್ಮಿಕಾ ಮಂದಣ್ಣ ಎದುರಿಸುವ ರೀತಿ ಹಿರಿಯ ನಟಿ ಮಧೂ ಅವರ ಮನ ಗೆದ್ದಿದೆ. 'ಕಾಫಿ ವಿತ್ ಕರಣ್' ಶೋನಲ್ಲಿ ರಶ್ಮಿಕಾ ಮಾತನಾಡಿದ ಶೈಲಿಯನ್ನು ಮೆಚ್ಚಿ ಮಧೂ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಮಾತನಾಡಿದ ನಟಿ ಮಧೂ, ಕಾಫಿ ವಿತ್ ಕರಣ್ ಶೋನಲ್ಲಿ ರಶ್ಮಿಕಾ ತಮ್ಮ ಆಕ್ಸೆಂಟ್ ಹಾಗೂ ಟೀಕೆಗಳನ್ನು ನಗುತ್ತಲೇ ಸ್ವೀಕರಿಸಿದ ರೀತಿ ನನಗೆ ತುಂಬಾ ಹಿಡಿಸಿತು. 'ಹೌದು, ನಾನು ಸೌತ್ ಇಂಡಿಯನ್, ನನ್ನ ಆಕ್ಸೆಂಟ್ ಹೀಗೆಯೇ ಇರುತ್ತದೆ' ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುವ ಆ ಆತ್ಮವಿಶ್ವಾಸ ನಿಜಕ್ಕೂ ಮೆಚ್ಚುವಂತದ್ದು’ ಎಂದಿದ್ದಾರೆ.

ಬಾಲಿವುಡ್‌ನ ಹಳೆಯ ದಿನ ನೆನೆದ ಮಧೂ

ಇದೇ ವೇಳೆ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಮಧೂ, ಹಿಂದಿ ಚಿತ್ರರಂಗದಲ್ಲಿದ್ದಾಗ ತಮಗೂ ಆಕ್ಸೆಂಟ್‌ನಿಂದಾಗಿ ಜಡ್ಜ್ ಮಾಡುತ್ತಾರೆಂಬ ಭಯವಿತ್ತು ಎಂದಿದ್ದಾರೆ. ‘ನಾನು ಬಾಲಿವುಡ್‌ಗೆ ಬಂದಾಗ ದಕ್ಷಿಣ ಭಾರತದ ಆಕ್ಸೆಂಟ್ ಬಾರದಂತೆ ತಡೆಯಲು ಉರ್ದು ಶಿಕ್ಷಕರನ್ನು ಇಟ್ಟುಕೊಂಡು ಕಷ್ಟಪಟ್ಟು ಹಿಂದಿ ಕಲಿತಿದ್ದೆ.

ನೀನು ನಿಜವಾದ ಸ್ಟಾರ್

ನನ್ನ ಮಾತಿನಲ್ಲಿ ಸ್ವಲ್ಪವೇ ಸೌತ್ ಆಕ್ಸೆಂಟ್ ಕಂಡುಬಂದರೂ ಗಾಬರಿಯಾಗುತ್ತಿದ್ದೆ. 'ನಿಮ್ಮ ಹಿಂದಿ ಉತ್ತರ ಭಾರತದವರಿಗಿಂತ ಚೆನ್ನಾಗಿದೆ' ಎಂದು ಜನರು ಅಂದಾಗ ಹೆಮ್ಮೆಪಡುತ್ತಿದ್ದೆ. ಆದರೆ ನನ್ನ ಸೌತ್ ಇಂಡಿಯನ್ ಆಕ್ಸೆಂಟ್ ಅನ್ನು ಸಹಜವಾಗಿ ಒಪ್ಪಿಕೊಳ್ಳಲು ನನಗೆ 30 ರಿಂದ 35 ವರ್ಷಗಳೇ ಬೇಕಾಯಿತು. ರಶ್ಮಿಕಾ, ನಿನಗೆ ಇನ್ನಷ್ಟು ಶಕ್ತಿ ಸಿಗಲಿ, ನೀನು ನಿಜವಾದ ಸ್ಟಾರ್’ ಎಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: 3 ತಿಂಗಳ ಭೀಕರ ಕಾಡ್ಗಿಚ್ಚಿನ ನಂತರ ವರುಣನ ಕೃಪೆ: ಮಳೆಯಲ್ಲೇ ಅಡ್ಡಬಿದ್ದು ಕೈಮುಗಿದು ಕಣ್ಣೀರಿಟ್ಟ ಅಗ್ನಿಶಾಮಕ ಸಿಬ್ಬಂದಿ | Indonesia Rain

ಟೀಕೆಗಳಿಗೆ ರಶ್ಮಿಕಾ ಖಡಕ್ ಉತ್ತರ

ರಶ್ಮಿಕಾ ಹಿಂದಿ ಮಾತನಾಡುವಾಗ ಅವರ ಕೊಡವ ಆಕ್ಸೆಂಟ್ ಇರುತ್ತದೆ ಎಂದು ಬಾಲಿವುಡ್‌ನಲ್ಲಿ ಆಗಾಗ ಟೀಕಿಸಲಾಗುತ್ತದೆ. ಈ ಬಗ್ಗೆ ಶೋನಲ್ಲಿ ಮಾತನಾಡಿದ ರಶ್ಮಿಕಾ, ‘ನಾನು ಇಂಡಸ್ಟ್ರಿಗೆ ಬಂದಾಗಿನಿಂದಲೂ ಯಾವುದಾದರೊಂದು ಕಾರಣಕ್ಕೆ ಟ್ರೋಲ್ ಆಗುತ್ತಲೇ ಇದ್ದೇನೆ. ಆದರೆ ನಾನು ಯಾವುದೇ ಗಡಿಗಳಿಗೆ ಸೀಮಿತವಾಗದೆ ಎಲ್ಲಾ ಭಾಷೆಗಳಲ್ಲೂ ನಟಿಸಲು ಬಯಸುತ್ತೇನೆ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net