ಎಂ.ವಿ.ಶಿವಶಂಕರಮೂರ್ತಿ ಹ್ಯಾಟ್ರಿಕ್ ಗೆಲುವು

16 nov tnp 01
ತಿ.ನರಸೀಪುರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾದ ಎಂ.ವಿ. ಶಿವಶಂಕರ ಮೂರ್ತಿ ಅವರನ್ನು ಅಭಿನಂದಿಸಲಾಯಿತು. ಎಚ್. ನಾಗರಾಜು, ನಾಗರಾಜಮೂರ್ತಿ, ಮರಿಸ್ವಾಮಿ, ಎಸ್.ನಾಗೇಶ್, ಆರ್.ಉಮೇಶ್ ಕುಮಾರ್ ಇತರರು ಇದ್ದರು.
Published on

ತಿ.ನರಸೀಪುರ: ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷರಾಗಿ ಎಂ.ವಿ.ಶಿವಶಂಕರಮೂರ್ತಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

ಪಟ್ಟಣದ ಕಾಲೇಜು ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಸೇರಿದಂತೆ ಖಜಾಂಚಿ ಹಾಗೂ ರಾಜ್ಯ ಪರಿಷರ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಿತು. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ರವರೆಗೂ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಂಘದ 36 ನಿರ್ದೇಶಕರು ಹಕ್ಕು ಚಲಾಯಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂ.ವಿ.ಶಿವಶಂಕರಮೂರ್ತಿ 25 ಮತಗಳನ್ನು ಪಡೆದು ಪ್ರಚಂಡ ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿಯಾಗಿದ್ದ ಬಿ. ಪುಟ್ಟರಾಜು ಅವರು 9 ಮತಗಳನ್ನು ಪಡೆದು ಪರಾಭವಗೊಂಡರು. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ ಎಚ್. ನಾಗರಾಜು 26 ಮತಗಳನ್ನು ಪಡೆದುಕೊಂಡು ಆಯ್ಕೆಯಾದರೆ, ಪ್ರತಿಸ್ಪರ್ಧಿ ಪರಶಿವ 8 ಮತಗಳನ್ನು ಪಡೆದುಕೊಂಡು ಸೋಲನ್ನನುಭವಿಸಿದರು. ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜು ಮೂರ್ತಿ 25 ಮತ ಪಡೆದು ಆಯ್ಕೆಯಾದರೆ, ಪ್ರತಿಸ್ಪರ್ಧಿಯಾಗಿದ್ದ ಗೋವಿಂದ 9 ಮತ ಪಡೆದು ಸೋಲನ್ನು ಒಪ್ಪಿಕೊಂಡರು.

ಚುನಾವಣಾ ಅಧಿಕಾರಿಯಾಗಿ ಶಿಕ್ಷಕ ಸಿದ್ದಪ್ಪಾಜಿ ಕಾರ್ಯ ನಿರ್ವಹಿಸಿದರು. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕಚೇರಿಯ ಮುಂಭಾಗ ಪಟಾಕಿ ಸಿಡಿಸಿ, ಸಿಹಿಯನ್ನ ವಿತರಿಸಿ ವಿಜಯೋತ್ಸವ ಆಚರಿಸಲಾಯಿತು.

ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ನೌಕರರ ಸಂಘದ ನಿರ್ದೇಶಕರಾದ ಎ.ಗಜೇಂದ್ರ, ಎಸ್.ನಾಗೇಶ, ಎನ್.ರೇವಣ್ಣ, ಜಿ.ಸಿದ್ದಮಲ್ಲಪ್ಪ, ಎಂ.ಶಿವಸ್ವಾಮಿ, ರುದ್ರೇಶ್, ಎಂ.ಎಸ್.ಆನಂದ್, ಸಿ.ಮಂಜುನಾಥ್, ಎಚ್.ಸಿ.ಕೆಂಡಗಣ್ಣಸ್ವಾಮಿ, ಕೆ.ನಂದೀಶ್‌ಕುಮಾರ್, ಮಹೇಶ್, ಎಂ.ಈಶ್ವರ, ಎಂ.ನಾಗು, ಎನ್.ಸರಸ್ವತಿ, ಪುಟ್ಟಸ್ವಾಮಿ, ಈಶ್ವರ, ಎಂ.ಬಸವನಾಯಕ, ನೇತ್ರ ಪರೀಕ್ಷಕ ಆರ್.ಉಮೇಶ್ ಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net