ಹೊಸ ವರ್ಷಾಚರಣೆಗೆ ಮುತ್ತತ್ತಿಗೆ ತೆರಳುವ ಯೋಜನೆಯಿದ್ದರೇ ಈಗಲೇ ಬದಲಾಯಿಸಿಕೊಳ್ಳಿ

muttatti 31 dec 19
Published on

ಸಾತನೂರು: ಚೂಡಳ್ಳಿ ಬಳಿಯಿರುವ ಕಾವೇರಿ ವನ್ಯಧಾಮದ ಚೆಕ್​ಪೋಸ್ಟ್ ಬಂದ್ ಮಾಡಿದ್ದು, ಹೊಸ ವರ್ಷಾಚರಣೆಗೆ ಮುತ್ತತ್ತಿಗೆ ತೆರಳುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಸಾತನೂರು ಮಾರ್ಗವಾಗಿ ಸಾವಿರಾರು ಪ್ರವಾಸಿಗರು ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಾರೆ. ಮುತ್ತತ್ತಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿಗೆ ಸೇರಿದ್ದು, ತಹಸೀಲ್ದಾರ್ ಚಂದ್ರಮೌಳಿ ಮಂಗಳವಾರ (ಡಿ.31)ರಂದು ಬೆಳಗ್ಗೆ 6 ಗಂಟೆಯಿಂದ 2020ರ ಜ.2ರ ಬೆಳಗ್ಗೆ 6 ಗಂಟೆವರೆಗೆ ಪ್ರವಾಸಿಗರ ಭೇಟಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಚೂಡಹಳ್ಳಿ ಚೆಕ್​ಪೋಸ್ಟನ್ನು ಡಿ.31ರಿಂದಲೇ ಬಂದ್ ಮಾಡಲಾಗುತ್ತದೆ.

ಮುತ್ತತ್ತಿ ಪ್ರದೇಶ ಕಾವೇರಿ ವನ್ಯಧಾಮವಾಗಿರು ವುದರಿಂದ ವನ್ಯಜೀವಿ ಕಾನೂನು ಪ್ರಕಾರ ರಾತ್ರಿ ವೇಳೆಯೂ ಪ್ರವಾಸಿಗರನ್ನು ನಿಷೇಧಿಸಲಾಗಿದೆ.

ವನ್ಯಜೀವಿ ಕಾಯ್ದೆ ಪ್ರಕಾರ ಸಂಜೆ 5 ಗಂಟೆ ನಂತರ ಕಾವೇರಿ ವನ್ಯಜೀವಿ ಧಾಮದೊಳಗೆ ಪ್ರವಾಸಿಗರನ್ನು ಬಿಡುವಂತಿಲ್ಲ. ಈ ಬಾರಿ ಹೊಸ ವರ್ಷಾಚರಣೆಯಂದು ಮೂರು ದಿನ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. | ಕಿರಣ್ ಕುಮಾರ್ ಜಿ. ಕರತಂಗಿ ಸಂಗಮ ಆರ್​ಎಫ್​ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net