ಗೆಳತಿಯನ್ನು ಮದುವೆಯಾಗಲು ಹಿಂದು ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ! | Hinduism

dk (48)
Published on

ಉತ್ತರಪ್ರದೇಶ: ಇಲ್ಲಿನ 34 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಮದುವೆಯಾಗಲು ಹಿಂದು(Hinduism)ಧರ್ಮಕ್ಕೆ ಮತಾಂತರಗೊಂಡಿದ್ದು, ತನ್ನ ಹೆಸರನ್ನು ಸದ್ದಾಂನಿಂದ ಶಿವಶಂಕರ್ ಎಂದು ಬದಲಾಯಿಸಿಕೊಂಡಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಸದ್ದಾಂ ಮತ್ತು ಆತನ ಕುಟುಂಬದವರ ವಿರುದ್ಧ ಅತ್ಯಾಚಾರ ಮತ್ತು ಗರ್ಭಪಾತ ಮಾಡಿಸಲು ಒತ್ತಾಯಿಸಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಆಕೆ ಪ್ರಕರಣ ದಾಖಲಿಸಿದ್ದಳು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ದೇವೇಂದ್ರ ಸಿಂಗ್ ಹೇಳಿದ್ದಾರೆ.

ಕಳೆದ 10 ವರ್ಷಗಳಿಂದ ಆಕೆಯನ್ನು ಪ್ರೀತಿಸುತ್ತಿದ್ದು, ಇದೀಗ ಮದುವೆಯಾಗಲು ಒಪ್ಪಿದ್ದಾರೆ. ತಮ್ಮ ಇಚ್ಛೆಯಿಂದಲೇ ಮದುವೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣದ ಹಿನ್ನೆಲೆ..

ನಗರ ಬಜಾರ್ ನಿವಾಸಿ ಸದ್ದಾಂ ಹುಸೇನ್ ಅದೇ ಗ್ರಾಮದ ಮಹಿಳೆ (ಸುಮಾರು 30 ವರ್ಷ) ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರಿಂದ ಮದುವೆ ಸಾಧ್ಯವಾಗಿರಲಿಲ್ಲ. ಹುಡುಗಿ ತನ್ನನ್ನು ಮದುವೆಯಾಗುವಂತೆ ಹಲವು ಬಾರಿ ಒತ್ತಡ ಹೇರಿದಳು, ಆದರೆ ಸದ್ದಾಂನ ಮನೆಯವರು ಅವಳನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net