

ಹೈದರಾಬಾದ್: ಕೋವಿಡ್ನಿಂದ ಮೃತಪಟ್ಟಿದ್ದಾನೆಂದು ಶಂಕಿಸಿದ ಕುಟುಂಬದವರು ವೃದ್ಧನ ಅಂತ್ಯಕ್ರಿಯೆಗೆ ನಿರಾಕರಿಸಿದ್ದಾರೆ. ಆದರೆ, ಅದೇ ಶವಕ್ಕೆ ಮುಸ್ಲಿಂ ಯುವಕರು ಅಂತಿಮ ವಿಧಿ-ವಿಧಾನ ನೆರವೇರಿಸಿದ್ದಾರೆ. ಕೋಮು ಸಾಮರಸ್ಯದ ಪ್ರತೀಕವಾದ ಈ ಘಟನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಏಳು ಯುವಕರು ಹಿಂದ ವೃದ್ಧನ ಅಂತ್ಯಕ್ರಿಯೆಯನ್ನು ನೆರವೇರಿಸಿದರು.
ಕುಟುಂಬದ ಯಜಮಾನ ಸೋಮವಾರ ಮೃತಪಟ್ಟಿದ್ದರು. ಬಳಿಕ ಆತನಿಗೆ ಕೋವಿಡ್ ಇದೆ ಶಂಕಿಸಿದ ಮನೆಯ ಸದಸ್ಯರು ತಮಗೂ ಕೋವಿಡ್ ಅಂಟಬಹುದು ಎಂದು ಯಾರೂ ಶವದ ಬಳಿ ಸುಳಿಯಲಿಲ್ಲ. ಅಂತ್ಯಕ್ರಿಯೆ ನೆರವೇರಿಸಲು ಒಪ್ಪಲ್ಲಿಲ್ಲ. ಸ್ಥಳೀಯ ಕಾರ್ಪೋರೇಟರ್ ಹಾಗೂ ಪೊಲೀಸರು ಮನವೊಲಿಸಿದರು 65 ವರ್ಷದ ವೃದ್ಧನ ಅಂತ್ಯಸಂಸ್ಕಾರ ನೆರವೇರಿಸಲು ಒಪ್ಪಲೇ ಇಲ್ಲ.
ಕೊನೆಗೆ ಅಬ್ದುಲ್ ರಬ್, ಮುನೀರ್, ಇಶಾಕ್, ನಾಸೀರ್ ಅಲಿ, ಶೋಯಿಬ್, ಇಮ್ರಾನ್ ಮೃತದೇಹಕ್ಕೆ ಅಂತಿಮ ವಿಧಿ-ವಿಧಾನ ನೆರವೇರಿಸಲು ನಿರ್ಧರಿಸಿದರು. ಕೋವಿಡ್ ಶಿಷ್ಟಾಚಾರದ ಪ್ರಕಾರ ಅಂಬುಲೆನ್ಸ್ನಲ್ಲಿ ಶವವನ್ನು ಸಾಗಿಸಿ ಅಂತ್ಯಕ್ರಿಯೆ ಮುಗಿಸಿದರು.
ಇದು ಕೋಮು ಸಾಮರಸ್ಯದ ನಾಡು. ಹೀಗಾಗಿಯೇ ಅಂತ್ಯ ಸಂಸ್ಕಾರವನ್ನು ಮಾಡಲು ಒಪ್ಪಿಕೊಂಡಿದ್ದಾಗಿ ಯುವಕರು ಹೇಳಿದರು.