VIDEO| ಆಕೆ ಹಿಂದೂ, ದೊಡ್ಡವಳಾದ ಮೇಲೆ ಅವಳನ್ನು ಕೊಲ್ಲುವೆ; ಶಿಕ್ಷಕಿಯ ಮುಂದೆಯೇ ಸಹಪಾಠಿಗೆ ಬೆದರಿಕೆಯೊಡ್ಡಿದ ಪುಟ್ಟ ಬಾಲಕಿ

Viral News
Published on

ನವದೆಹಲಿ: ಮಕ್ಕಳು ದೇವ ಸಮಾನ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಚಿಕ್ಕ ಮಕ್ಕಳು ಏನೇ ಮಾತನಾಡಿದರೂ ಅಧೂ ನೋದಲು ಚೆಂದವಾಗಿರುತ್ತದೆ. ಪುಟ್ಟ ಮಕ್ಕಳಲ್ಲಿ ಜಾತಿ ಭೇದಗಳಾಗಿರಲಿ ಅಥವಾ ಧರ್ಮದ ಬಗ್ಗೆ ದ್ವೇಷ ಕಾಣಿಸುವುದಿಲ್ಲ. ಆದರೆ, ಇಲ್ಲೊಂದು ಪುಟ್ಟ ಬಾಲಕಿ ನೀಡಿರುವ ಹೇಳಿಕೆ ವೈರಲ್​ ಆಗಿದ್ದು, ಪುಟ್ಟ ಬಾಲಕಿ ಆಡಿರುವ ದ್ವೇಷಪೂರಿತ ಮಾತುಗಳಿಂದ ನೆಟ್ಟಿಗರು ಆಘಾತಕ್ಕೆ ಒಳಗಾಗಿದ್ದಾರೆ.

ಮುಸ್ಲಿಂ ಶಾಲಾ ಬಾಲಕಿಯೊಬ್ಬಳು ತನ್ನ ಸಹಪಾಠಿ ಹಿಂದೂ ಎಂಬ ಕಾರಣಕ್ಕೆ ಆಕೆಯನ್ನು ತಾನು ದೊಡ್ಡವಳಾದ ಮೇಲೆ ಕೊಲ್ಲುತ್ತೇನೆ ಎಂದು ಶಿಕ್ಷಕಿಯ ಮುಂದೆ ಹೇಳುತ್ತಿರುವ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಚಿಕ್ಕ ಮಗುವಿನ ಬಾಯಲ್ಲಿ ಇಷ್ಟೊಂದು ದ್ವೇಷಪೂರಿತ ಮಾತು ಬರಲು ಹೇಗೆ ಸಾಧ್ಯ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಮುಸ್ಲಿಂ ಧರ್ಮದ ಬಾಲಕಿಯೊಬ್ಬಳು ತನ್ನ ಸಹಪಾಠಿ ಪಲ್ಲವಿ ಹಿಂದೂ ಎಂಬ ಕಾರಣಕ್ಕೆ ನಾನು ದೊಡ್ಡವಳಾದ ಮೇಲೆ ನಮ್ಮ ಮನೆಯಲ್ಲಿರುವ ಬಂದೂಕಿನಿಂದ ಆಕೆಯನ್ನು ಗುಂಡಿಟ್ಟು ಕೊಲ್ಲುತ್ತೇನೆ. ಶಿಕ್ಷಕಿ ನೀನು ಯಾವ ದೇವರನ್ನು ಪೂಜಿಸುತ್ತೀಯಾ ಎಂದು ಆ ಬಾಲಕಿಯ ಬಳಿ ಕೇಳಿದಾಗ ಆಕೆ ಅಲ್ಲಾ ಎಂದು ಉತ್ತರಿಸಿ, ಅಲ್ಲಾನನ್ನು ಪೂಜಿಸದವರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈವರೆಗೆ 60 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಅನೇಕರು ಬಾಲಕಿಯ ಪೋಷಕರನ್ನು ದೂಷಿಸಿದ್ದು, ಈ ಬಗ್ಗೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net