

ಭೋಪಾಲ್ (ಮಧ್ಯಪ್ರದೇಶ): ಹುಬ್ಬಳ್ಳಿಯಲ್ಲಿ ಪ್ರೀತಿ ನಿರಾಕರಿಸಿದ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಹತ್ಯೆ ಮಾಡಿದ ಘಟನೆ ಮಾಸುವ ಮುನ್ನ ಲವ್ ಜಿಹಾದ್ ಗೆ ಸಿಲುಕಿದ ಹಿಂದೂ ಯುವತಿಯ ಆಸ್ತಿ ಬರೆಸಿಕೊಳ್ಳಲು ಪುಸ್ಲಿಂ ಪ್ರೇಮಿ 1ತಿಂಗಳು ಮನೆಯಿಂದ ಹೊರಗೆ ಬಿಡದೆ ಕಣ್ಣಿಗೆ ಕಾರದ ಪುಡಿ ಹಾಕಿ ಕ್ರೂರವಾಗಿ ಚಿತ್ರಹಿಂಸೆ ನೀಡಿರುವ ಘಟನೆ ಮಧ್ಯಪ್ರದೇಶದ ಗುನಾ ನಗರದಲ್ಲಿ ವರದಿಯಾಗಿದೆ.
ಅಯಾನ್ ಪಠಾಣ್ ಹಿಂದೂ ಹುಡುಗಿಯನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿ ಲಿವ್-ಇನ್ ಸಂಬಂಧದಲ್ಲಿ ಮುಂದುವರಿಯಲು ಮನವೊಲಿಸಿದ್ದ. ಅದರಂತೆ ಗುನಾದಲ್ಲಿರುವ ಬಾಲಕಿಯ ನಿವಾಸದಲ್ಲಿ ಇವರಿಬ್ಬರು ವಾಸವಾಗಿದ್ದರು. ಕೆಲವು ದಿನಗಳ ನಂತರ, ಅಯಾನ್ ಮನೆಯನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಹುಡುಗಿಯನ್ನು ಒತ್ತಾಯಿಸಲು ಪ್ರಾರಂಭಿಸಿದ್ದಾನೆ. ಹುಡುಗಿ ಅದಕ್ಕೆ ನಿರಾಕರಿಸಿದ್ದಾಳೆ.
ಶಗ ಸಿಟ್ಟಿಗೆದ್ದ ಅಯಾನ್ ಆಕೆಯನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಮನೆಯಲ್ಲಿ ಕೂಡಿಹಾಕಿ ನಿರಂತರವಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದ್ದಾನೆ. ನಿತ್ಯ ಆಕೆಯನ್ನು ಸ್ಟೀಲ್ ಪೈಪ್ ಮತ್ತು ಬೆಲ್ಟ್ನಿಂದ ಥಳಿಸಸುತ್ತ ಬಂದಿದ್ದಾನೆ. ಬಳಿಕ ಆಕೆಯ ಗಾಯಗಳಿಗೆ ಕಾರದ ಪುಡಿಯನ್ನು ಹಚ್ಚಿ, ಕಣ್ಣುಗಳಿಗೆ ಸಹ ಕಾರದ ಪುಡಿ ಹಾಕಿ ಹಿಂಸಿಸಿದ್ದಾನೆ. ಆಕೆ ಕಿರುಚಲು ಸಾಧ್ಯವಾಗದಂತೆ ಆಕೆಯ ಬಾಯಿಗೆ ಪ್ಲಾಸ್ಟರ್ ಹಾಕುತ್ತಿದ್ದ ಎನ್ನಲಾಗಿದೆ.
ಒಂದು ತಿಂಗಳು ಇದೇ ರೀತಿ ಕಿರುಕುಳ ನೀಡಿದ್ದಾನೆ. ಇದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ -ನೀಡಿದ್ದಾರೆ. ಕೂಡಲೇ ಜಾಗೃತರಾದ ಪೊಲೀಸರು ಸೆರೆಯಿಂದ ಆಕೆಯನ್ನು ಬಿಡಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ಸಂತ್ರಸ್ತೆ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.