ಭಾವೈಕ್ಯತೆಯ ಸಂದೇಶ; ಮುಸ್ಲಿಂ ಮುಖಂಡನ ಮನೆಯಲ್ಲಿ ಪೂಜೆ, ಭಜನೆ

Muslim Leader In Koppal
Published on

ಕೊಪ್ಪಳ: ನೂರಾರು ಅಯ್ಯಪ್ಪಸ್ವಾಮಿ ಮಲಾಧಾರಿಗಳು ಗಂಗಾವತಿ ಪಟ್ಟಣದ ಜಯನಗರದಲ್ಲಿರುವ ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷರಾಗಿರೋ ಕಾಶಿಂ ಅಲಿ ಮುದ್ದಾಬಳ್ಳಿಯವರ ಮನೆಯಲ್ಲಿ ಪೂಜೆ, ಭಜನೆ ಮಾಡಿ ಮುದ್ದಾಬಳ್ಳಿಯವರು ತಮ್ಮ ಮನೆಯಲ್ಲೇ ಅನ್ನಸಂತರ್ಪಣೆ ಮಾಡಿದರು.

ಮುಸ್ಲಿಂ ಮನೆಯಲ್ಲಿ ಹಿಂದೂ ಧರ್ಮದ ಆಚರಣೆಗಳಂತೆ ಕಳೆದ ರಾತ್ರಿ ಅದ್ದೂರಿಯಾಗಿ ಅಯ್ಯಪ್ಪಸ್ವಾಮಿ ಪೂಜೆ ನಡೆದಿದೆ. ಕಾಶಿಂ ಅಲಿ ಮುದ್ದಾಬಳ್ಳಿ ಕುಟುಂಬ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಜೊತೆ ಅಯ್ಯಪ್ಪಸ್ವಾಮಿಯ ಕುರಿತು ಭಜನೆ ಮಾಡಿದರು. ನಂತರ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕುಟುಂಬ ಸತ್ಕರಿಸಿದೆ. ನೂರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕಾಶಿಂ ಅಲಿ ಮುದ್ದಾಬಳ್ಳಿಯವರು ತಮ್ಮ ಮನೆಯಲ್ಲೇ ಅನ್ನಸಂತರ್ಪಣೆ ಮಾಡಿದರು.

ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷರಾಗಿರೋ ಕಾಶಿಂ ಅಲಿ ಮಾತನಾಡಿ, ಎಲ್ಲಾ ಧರ್ಮಗಳು ಒಂದೇ, ಎಲ್ಲಾ ಧರ್ಮದ ಸಾರಗಳು ಗೊತ್ತಿರಬೇಕು ಎಂದರು.

ಮುಸ್ಲಿಂ ಸಮುದಾಯದ ವ್ಯಕ್ತಿ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಿ ಪ್ರಸಾದ ಹಂಚಲಾಗಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಮುಖಂಡ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net